ಭಗೀರಥ ಜಯಂತೋತ್ಸವ

ಚಿತ್ರದುರ್ಗ:

        ಭಗೀರಥಪೀಠ ಬ್ರಹ್ಮವಿದ್ಯಾನಗರ ಸುಕ್ಷೇತ್ರದಲ್ಲಿ ಫೆ.9 ಮತ್ತು 10 ರಂದು ಅಖಿಲ ಭಾರತ ಭಗೀರಥ ಜಯಂತ್ಯೋತ್ಸವ ಪಟ್ಟಾಭಿಷೇಕದ 19 ನೇ ವಾರ್ಷಿಕ ಮಹೋತ್ಸವ, ಸಾಮೂಹಿಕ ವಿವಾಹಗಳು, ಸಾಂಸ್ಕತಿಕೋತ್ಸವ, ಧಾರ್ಮಿಕ ಸಮಾರಂಭಗಳು ನಡೆಯಲಿದೆ ಎಂದು ಭಗೀರಥಪೀಠದ ಡಾ.ಪುರಷೋತ್ತಮಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.

        ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಮಿಗಳು 9 ರಂದು ಸಂಜೆ 6 ಗಂಟೆಗೆ ಸಾಂಸ್ಕತಿಕೋತ್ಸವ ಮತ್ತು ಧಾರ್ಮಿಕ ಸಮಾರಂಭ, 10 ರಂದು ಬೆಳಿಗ್ಗೆ 9 ಕ್ಕೆ ಸಾಮೂಹಿಕ ವಿವಾಹ ಮತ್ತು ಧಾರ್ಮಿಕ ಸಮಾರಂಭ, 11 ಗಂಟೆಗೆ ಅಖಿಲ ಭಾರತ ಭಗೀರಥ ಜಯಂತ್ಯೋತ್ಸವ ನಡೆಯಲಿದೆ.

        ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅಧ್ಯಕ್ಷತೆ ವಹಿಸುವರು. ಸಚಿವರು ಬಾಜಪ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷ ದಾರಾಸಿಂಗ್ ಚೌಹ್ವಾನ್ ಮಹಾದ್ವಾರ ಉದ್ಘಾಟಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಭಾ ಮಂಟಪ ಉದ್ಘಾಟಿಸಲಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕøತ ಯುಗಧರ್ಮ ರಾಮಣ್ಣ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

        10 ರಂದು ನಡೆಯುವ 19 ನೇ ವರ್ಷದ ಪಟ್ಟಾಭಿಷೇಕದ ಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳು, ಧಾರ್ಮಿಕ ಸಮಾರಂಭವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಉದ್ಘಾಟಿಸುವರು. ಅಖಿಲ ಭಾರತ ಉಪ್ಪಾರ ಸಗರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಮುನೀಬ್‍ಸಿಂಗ್ ಚೌಹ್ವಾಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶ್ರೀಮಠದ 2019 ರ ಕ್ಯಾಲೆಂಡರ್ ಬಿಡುಗಡೆಗೊಳಿಸುವರು.

         ಬೆಳಿಗ್ಗೆ 11 ಕ್ಕೆ ಅಖಿಲ ಭಾರತ ಭಗೀರಥ ಜಯಂತ್ಯೋತ್ಸವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭಗೀರಥ ಭಾವಚಿತ್ರ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಲೇಪಾಕ್ಷಿ ಸ್ವಾಮಿಗಳ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ.

         ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಭಗೀರಥಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂತರಾಷ್ಟ್ರೀಯ ವೈಟ್‍ಲಿಫ್ಟಿರ್ ಶಿರೋಮಣಿ, ಥ್ರೋಬಾಲ್ ಅಂತರಾಷ್ಟ್ರೀಯ ಕ್ರೀಡಾಪಟು ಗಂಗಾದೇವಿ ಶ್ರೀನಿವಾಸ್ ಅಮ್ಮಾಪುರ, ಅಂತರಾಷ್ಟ್ರೀಯ ಸೈಕಲಿಸ್ಟ್ ಪ್ರವೀಣ್ ಕಲ್ಲಪ್ಪ ಮಕ್ಕಳಗಿ, ಕ್ಲಾಸಿಕ್ ವಿದ್ಯಾಸಂಸ್ಥೆಯ ಲಕ್ಷ್ಮಣ್‍ಉಪ್ಪಾರ್, ಅಂತರಾಷ್ಟ್ರೀಯ ಸೈಕಲಿಸ್ಟ್ ಸವಿತಾಮಠೂರ್, ಶ್ರೀಶೈಲ ರಾಯಣ್ಣ, ಪತ್ರಿಕೋದ್ಯಮಿ ಕೆ.ಟಿ.ಮೋಹನ್‍ಕುಮಾರ್ ಇವರುಗಳಿಗೆ ಲೇಪಾಕ್ಷಶ್ರೀ ಪ್ರಶಸ್ತಿ ನೀಡಲಾಗುವುದು.

         ಅಂತರಾಜ್ಯ ಪ್ರಥಮ ದರ್ಜೆ ಗುತ್ತಿಗೆದಾರ ಡಿ.ವೈ.ಉಪ್ಪಾರ್, ಐಶ್ವರ್ಯ ಗ್ರೂಪ್ಸ್ ಮಾಲೀಕ ಚಂದ್ರಪ್ಪ ಇವರುಗಳಿಗೆ ಭಗೀರಥ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

          ಎರಡು ದಿನಗಳು ನಡೆಯುವ ಈ ಕಾರ್ಯಕ್ರಮಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಿಂದ ಭಕ್ತಾಧಿಗಳು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಐವತ್ತು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಎಲ್ಲರಿಗೂ ತಿಂಡಿ ಊಟದ ವ್ಯವಸ್ಥೆ ಮಾಡಲಾಗುವುದು. 25 ಜೋಡಿ ಸಾಮೂಹಿಕ ಲಗ್ನ ಕೂಡ ಇಲ್ಲಿ ನಡೆಯಲಿದೆ. ಮುರುಘಾಮಠದ ಡಾ.ಶಿವಮೂರ್ತಿ ಶರಣರು, ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಆರ್.ಮೂರ್ತಿ, ನಿವೃತ್ತ ಡಿ.ವೈ.ಎಸ್ಪಿ ಎಸ್.ನಾಗರಾಜ್, ಅಜ್ಜಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link