ಬಳ್ಳಾರಿ:
ಪ್ರತಿಯೋಬ್ಬರೂ ಹೆಲ್ಮೆಟ್ ಧರಿಸುವದನ್ನು ರೂಢಿಸಿಕೊಳ್ಳಬೇಕು, ಇದರಿಂದ ಅಪಘಾತದಲ್ಲಿ ಸಂಭವಿಸುವ ಪ್ರಾಣವನ್ನು ರಕ್ಷಿಸಿಕೊಳ್ಳಬಹುದು ಎಂದು ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ಅವರು ಹೇಳಿದರು.
ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಾಲಯದ ಬಳಿ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಹೆಲ್ಮೆಟ್ ಕುರಿತು ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಹೆಲ್ಮೆಟ್ ಕುರಿತು ಇಲಾಖೇ ಸೇರಿದಂತೆ ನಾನಾ ಸಂಘ ಸಂಸ್ಥೆಯ ಪದಾಧಿಕಾರಿಗಳು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹೆಲ್ಮೆಟ್ ರಹಿತ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಹೆಲ್ಮೆಟ್ ಧರಿಸುವುದು ಶೋಕಿ ಮಾಡುವದಕ್ಕಲ್ಲ, ಅದು ನಮ್ಮ ಪ್ರಾಣ ರಕ್ಷಣೆಗೆ ಎಂಬುದನ್ನು ಮರೆಯಕೂಡದು.
ನಾನಾ ಕಾರಣಗಳಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇಹದ ಇತರೇ ಭಾಗಗಕ್ಕೆ ಪೆಟ್ಟು ಬಿದ್ದರೇ ಕಷ್ಟಪಟ್ಟಾದರೂ ಅದನ್ನು ಗುಣಪಡಿಸಲು ಪ್ರಯತ್ನಿಸಬಹುದು. ಆದರೇ, ತಲೆಗೆ ಬಲವಾದ ಪೆಟ್ಟು ಬಿದ್ದರೇ ಚಿಕಿತ್ಸೆ ಕಲ್ಪಿಸುವುದು ಕಷ್ಟಕರವಾಗಲಿದೆ. ಕೆಲವೊಮ್ಮ ಸ್ಥಳದಲ್ಲೇ ಪ್ರಾಣ ಹೋಗುವ ಸಾಧ್ಯತೆ ಹೆಚ್ಚಿರಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೋಬ್ಬರೂ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಇಂದಿನಿಂದಲೇ ಹೆಲ್ಮೆಟ್ ಧರಿಸುವದನ್ನು ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಾಹನ ಚಲಾಯಿಸುವಾಗ ಪ್ರತಿಯೋಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಇದರಿಂಧ ನಮಗೇ ಒಳ್ಳೆಯದು ಹೊರತು ಅದಿಕಾರಿಗಳಗಲ್ಲ, ಕೆಲವೋಮ್ಮ ನಿಯಮ ಉಲ್ಲಂಘನೆ ಮಾಡಿದಾಗ ಅಧಿಕಾರಿಗಳು ದಂಡವಿಧಿಸಿದರೇ ಅವರೊಂಧಿಗೆ ವಾದಕ್ಕಿಳಿಯುವುದು ಸಾಮಾನ್ಯವಾಗಿದೆ. ಅವರು ಹೇಳುವುದು ನಮ್ಮ ಒಳ್ಳೆಯದಕ್ಕೆ ಎಂಬುದನ್ನು ಅರಿತು ಅಧಿಕಾರಿಗಳೊಂದಿಗೆ ಸವಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.
ದೇವಾಲಯದಿಂದ ಹೆಲ್ಮೆಟ್ ಕುರಿತು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ, ನಗರದ ಮೋತಿ ವೃತ್ತ, ಎಸ್ಪಿ ವೃತ್ತ, ಸುಧಾ ಕ್ರಾಸ್, ಸಂಗಮ್ ರಸ್ತೆ ಸೇರಿದಂತೆ ನಾನಾ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ಪ್ರತಿಯೋಬ್ಬರೂ ಹೆಲ್ಮೆಟ್ ಧರಿಸಿ ಜೀವ ಉಳೀಸಿ ಎಂದು 200ಕ್ಕೂ ಹೆಚ್ಚು ಬೈಕ್ ಸವಾರರು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಘವೇಂಧ್ರ, ಕಿಟ್ಟಿ, ನಾನಿ ಸೇರಿದಂತೆ, ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂಧಿಗಳು ಇತರರಿದ್ದರು