ಚಿತ್ರದುರ್ಗ
ಆಸ್ಪತ್ರೆಗಳಿಗೆ ಅಲೆದಾಡದೆ, ಯಾವುದೇ ಖರ್ಚುವೆಚ್ವವಿಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭ ಮಾರ್ಗವೆಂದರೆ ಅದು ಯೋಗ ಕಲಿಯುವುದು, ಮತ್ತು ಅದನ್ನು ತಪ್ಪದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಇದರಿಂದ ಖಂಡಿತವಾಗಿಯೂ ನೀವು ಜೀವನ ಪರ್ಯಂತ ರೋಗಗಳಿಂದ ಮುಕ್ತರಾಗಿ ಬದುಕಬಹುದು” ಎಂದು ಚಿತ್ರದುರ್ಗ ಪತಂಜಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್‍ನ ಅಧ್ಯಕ್ಷರಾದ ಮಲ್ಲಿಕಾರ್ಜುನಪ್ಪ ಹೇಳಿದರು.
ಅವರು ಇಂದು ನಗರದ ವಾಸವಿ ಶಾಲೆ ಹಿಂಭಾಗದ ಸವಿತಾ ಸಮಾಜ ಕಾಲೋನಿಯಲ್ಲಿ ಪತಂಜಲಿ ಯೋಗ ಪ್ರಚಾರ ಪ್ರಕಲ್ಪದಡಿಯಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ ಐದು ದಿನಗಳ ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಮಾತನಾಡಿದ ಯೋಗ ಗುರು ರವಿ ಕೆ.ಅಂಬೇಕರ್ “ಮಾನವನ ಜೀವನ ಕೇವಲ ಆಹಾರ, ನಿದ್ರೆ, ಮತ್ತು ಕಾಮಿನೀ ಭೋಗಗಳಷ್ಟೇ ಅಲ್ಲ, ಅವನ್ನು ಇತರೆ ಎಲ್ಲಾ ಪ್ರಾಣಿಗಳೂ ಮಾಡುತ್ತವೆ ಮನುಷ್ಯ ಜೀವನ ತುಂಬಾ ಶ್ರೇಷ್ಟವಾದದ್ದು ಯೋಗವೆಂದರೆ ಕೂಡುವಿಕೆ ಈ ನಮ್ಮ ದೇಹ ಜೀವಾತ್ಮ ಪರಮಾತ್ಮನ ಸಂಯೋಗವೇ ಆಗಿದೆ ದಾಸ ಶ್ರೇಷ್ಟರು ಹೇಳಿರುವಂತೆ ” ಮಾನವ ಜೀವನ ದೊಡ್ಡದು ಇದ ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರ” ಎಂಬ ಮಾತನ್ನು ನಾವು ಎಂದಿಗೂ ಮರೆಯಬಾರದು ನಮ್ಮ ಬದುಕು ಇನ್ನೊಬ್ಬರ ಬದುಕಿಗೆ ಉಪಯೋಗವಾಗಬೇಕು, ಸರ್ವಂತರ್ಯಾಮಿಯೂ, ಆಶ್ರಿತ ರಕ್ಷಕನೂ ಆಗಿರುವ ಪರಮಾತ್ಮನ ಆಜ್ಞಾಧೀನನಾಗಿ ಪರಹಿತಚಿಂತನೆಯಲ್ಲಿ ತೊಡಗಿದಾಗ ಜೀವನ ಸಾರ್ಥಕಗೊಳ್ಳುವುದು, ಯೋಗ ಧ್ಯಾನದಿಂದ ನಮ್ಮ ದೇಹ ಇಂದ್ರಿಯಗಳು ಶುದ್ಧಿಕರಣಗೊಳ್ಳುವುದಲ್ಲದೆ ನಮ್ಮ ದೇಹಾರೋಗ್ಯವೂ ಸುಧಾರಿಸುತ್ತದೆ ಎಂದು ತಿಳಿಸಿದರು.
ಶ್ರೀಮತಿ ರಾಧಾಮಣಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರೊಂದಿಗೆ ಉದ್ಘಾಟನೆಗೊಳಿಸಲಾಯಿತು, ಕಾಲೋನಿಯ ನಾಗರೀಕರಾದ ಶ್ರೀಮತಿ ರತ್ನರಾಮಚಂದ್ರಪ್ಪ, ರೂಪಾ, ಮುಕ್ತ, ಮಂಜುಳಾ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








