ಚಿತ್ರದುರ್ಗ:
ಡ್ರೈನೇಜ್ ವ್ಯವಸ್ಥೆಯಿಲ್ಲದೆ ಶೌಚದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಸರಿಪಡಿಸುವಂತೆ ವಾರ್ಡ್ ನಂ.18 ಚೌಡೇಶ್ವರಿನಗರ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ಅನೇಕ ವರ್ಷಗಳಿಂದಲೂ ಜೈನ್‍ಕಾಲೋನಿಯಲ್ಲಿ ಯು.ಜಿ.ಡಿ.ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನವೂ ರಸ್ತೆ ಮೇಲೆಯೇ ಯು.ಜಿ.ಡಿ.ನೀರು ಹರಿಯುತ್ತಿದೆ. ಇಲ್ಲಿ ಸುಮಾರು ನಲವತ್ತು ಮನೆಗಳಿದ್ದು ಇದರಿಂದ ನಾನಾ ರೀತಿಯ ರೋಗಗಳಿಗೆ ತುತ್ತಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಯ.ಜಿ.ಡಿ.ಲೈನ್ ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಜಯಣ್ಣ, ವೆಂಕಟೇಶ್ ಜಿ., ಎಂ.ಮಧು, ಆರ್.ಸುನಿತ, ಚಂದ್ರಶೇಖರ್, ರಂಜಿತ, ಎನ್.ಪ್ರಮೋದ, ಆಶ, ರತ್ನಮ್ಮ, ಶಾಂತಕುಮಾರಿ, ಪ್ರಶಾಂತ, ಪದ್ಮಾವತಿ, ಜಯಮ್ಮ, ಸೌಮ್ಯ, ಮಂಜುಳ, ರೂಪ, ಗಿರಿಜ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
