ಕಂಪ್ಲಿ
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಆದರ್ಶ ತತ್ವ ಹಾಗೂ ವಿಚಾರಧಾರೆಗಳು ಸಮಾಜ ಸುಧಾರಣೆಗೆ ಪೂರಕವಾಗಿವೆ ಎಂದು ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ನಗರದ ಎಪಿಎಂಸಿ ಆವರಣದಲ್ಲಿ, ಬಿಜೆಪಿ ಪಕ್ಷದ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಆಯೋಜಿಸಿದ್ದ ‘ಸಮರ್ಪಣಾ ದಿವಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ದೀನದಯಾಳ್ ಅವರ ಸಾಧನೆ ಇಂದಿಗೂ ಅವಿಸ್ಮರಣೀಯವಾಗಿದ್ದು, ಅವರ ತತ್ವ, ಸಿದ್ಧಾಂತಗಳೊಂದಿಗೆ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಕಳೆದ ಹತ್ತು ತಿಂಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಣ್ಮರೆಯಾಗಿವೆ. ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕ ಕಂಪ್ಲಿಯಲ್ಲಿ ಇದ್ದರೂ, ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಅವರಿಗೆ ಬೇಕಿಲ್ಲ. ಕಾಂಗ್ರೆಸ್‍ಗಿಂತ ಬಿಜೆಪಿ ಗಟ್ಟಿಯಾಗಿದೆ. ಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ದೇಶದ ಜನತೆಗೆ ಅನೇಕ ಯೋಜನೆಗಳನ್ನು ನೀಡಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಜನರಿಗೆ ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿಗೊಳಿಸಿ, ದೊಡ್ಡ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯರ್ರಂಗಳಿ ತಿಮ್ಮಾರೆಡ್ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ನಾಲ್ಕುವರೆ ವರ್ಷದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಿದೆ. ಈಗಾಗಲೇ ರೈತಾಪಿ ವರ್ಗ ಸೇರಿದಂತೆ ಜನತೆಗೆ ನಾನಾ ಯೋಜನೆಗಳನ್ನು ಕೊಡ ಮಾಡಿದೆ. ಬಿಜೆಪಿ ಪಕ್ಷಕ್ಕೆ ದೀನದಯಾಳ್ ಅವರು ದೊಡ್ಡಮಟ್ಟದ ಬುನಾದಿ ಹಾಕಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಿ, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತರಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಫಲಪುಷ್ಪ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಬ್ರಹ್ಮಯ್ಯ, ಕಂಪ್ಲಿ ಕ್ಷೇತ್ರ ಅಧ್ಯಕ್ಷ ಬೇರ್ಗಿ ಮಹೇಶಗೌಡ, ಉಪಾಧ್ಯಕ್ಷ ಬಿ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸುಧಾಕರ್, ಹನುಮಂತಪ್ಪ, ಪುರಸಭೆ ಸದಸ್ಯರಾದ ಎನ್.ರಾಮಂಜಿನೀಯಲು, ಸಣ್ಣ ಹುಲುಗಪ್ಪ, ವಾಲ್ಮೀಕಿ ರಘು, ಮುಖಂಡರಾದ ಲಿಂಗನಗೌಡ, ಜಿ.ರಾಮಣ್ಣ, ಬಿ.ದೇವೇಂದ್ರ, ಶ್ರೀಧರ್ ಶ್ರೇಷ್ಠಿ, ವೆಂಕಟೇಶ್ವರ ಶೆಟ್ಟಿ, ಬಸೇಜ್‍ರೆಡ್ಡಿ, ಟಿ.ವಿ.ಸುದರ್ಶನರೆಡ್ಡಿ, ಬಿ.ವೆಂಕಟೇಶ್, ಹಣ್ಣಿನ ನಾಗರಾಜ, ಜಯಪ್ರಕಾಶ್, ಭಾಸ್ಕರ್‍ರೆಡ್ಡಿ, ವೆಂಕಟರಮಣ, ಶಂಶುದ್ದೀನ್, ಕೃಷ್ಣ, ಆರ್.ಇಮಾಮ್‍ಸಾಬ್, ಹೂವಣ್ಣ, ಗುರು, ರಿಯಾಜ್, ಉಷಾ, ಪದ್ದಮ್ಮ, ವಿಜಯಲಕ್ಷ್ಮಿ ಕೆ.ಜ್ಯೋತಿ ಸೇರಿದಂತೆ ಅನೇಕರಿದ್ದರು.