ಹಗರಿಬೊಮ್ಮನಹಳ್ಳಿ
ಮುಂದಿನ ತಲೆಮಾರಿಗಾದರೂ ಅರಣ್ಯ ಉಳಿಯಬೇಕು ಎನ್ನುವುದಾದರೆ ಪ್ರತಿಯೊಬ್ಬರು ಮರಗಳನ್ನು ಸ್ವಾಭಿಮಾನದಿಂದ ಮರಗಳನ್ನು ಬೆಳಸಿ ಎಂದು ಹೊಸಪೇಟೆಯ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕಿರಣ್ಕುಮಾರ್ ತಿಳಿಸಿದರು.ಸಾಮಾಜಿಕ ಅರಣ್ಯ ಇಲಾಖೆಯಿಂದ ತಾಲೂಕಿನ ಮಾಲವಿಯ ಸಸಿ ಅಭಿವೃದ್ಧಿ ಪಾಲನ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎಸ್.ಎಂ.ಎ.ಎಫ್ ರೈತರಿಗಾಗಿ ಅರಣ್ಯ ಬೆಳೆಸುವ ಯೋಜನೆಯ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ರೈತರು ತಮ್ಮ ಹೊಲ, ಕಣಗಳಲ್ಲಿ ಸಸಿಗಳನ್ನು ನೆಟ್ಟು ಮರ ಬೆಳೆಸಲು ಸರ್ಕಾರದಿಂದ ಸಹಾಯಧನವಿದೆ ಎಂದು ತಿಳಿಸಿದರು.
ನಂತರ ಮಾಲವಿ ಗ್ರಾ.ಪಂ.ಉಪಾಧ್ಯಕ್ಷ ಚನ್ನಬಸಪ್ಪ ಮಾತನಾಡಿ, ಅನೇಕ ವರ್ಷಗಳಿಂದ ಭೂಮಿಯ ಶೇ.33ರಷ್ಟು ಅರಣ್ಯ ಹೊಂದಿರಬೇಕು ಎಂದು ಹೇಳುತ್ತಲೇ ಬಂದಿದ್ದು ಶೇ22ರಷ್ಟು ಮಾತ್ರ ಅರಣ್ಯವಾಗಿದೆ ಇನ್ನೂ ಶೇ.11ರಷು ಬಾಕಿ ಇದೆ ಎಂದು ಹೇಳುತ್ತಿದ್ದು, ಅದು ಇಂದಿಗೂ ಮುಂದುವರೆದಿರುವುದು ದಾಖಲೆಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ ಎನಿಸುತ್ತಿದೆ. ರೈತರನ್ನು ಮನವೂಲಿಸುವ ಯತ್ನ ಅರಣ್ಯ ಅಧಿಕಾರಿಗಳದಾಗಬೇಕು ಜಾಗೃತಿ ಮೂಡಿ ಮರಗಳನ್ನು ಬೆಳೆಸಲು ಪ್ರೋತ್ಸಹಿಸಬೇಕು ಎಂದರು.
ಸಂಪನ್ಮೂಲವ್ಯಕ್ತಿ ಖಲಿಂಸಾಬ್ ಮಾತನಾಡಿ, ಮನುಷ್ಯ ಸುಸ್ಥಿರವಾದ ಬದುಕನ್ನು ಕಟ್ಟಿಕೊಳ್ಳಲು ಅವಶ್ಯವಿರುವ ಗಾಳಿ, ನೀರು ಅಗತ್ಯವಾಗಿ ಬೇಕು. ಆದರೆ, ಅರಣ್ಯ ನಾಶದಿಂದ ಮಳೆಯ ಕೊರತೆ ಕಾಡುತ್ತಿದೆ. ಆದ್ದರಿಂದ ಪ್ರತಿಬೊಬ್ಬರು ಮರಗಳನ್ನು ಬೆಳಸಿ ಕಾಡನ್ನು ಉಳಿಸಿ ಎಂದರು. ಮಳೆಯ ಕೊರತೆಯಿಂದ ಮುಂದೆ ಆಹಾರದ ಕೊರತೆಯಾಗಲಿದೆ ಮುಂದೆ ಸಮತೋಲನ ಕಾಪಾಡಲು ಅರಣ್ಯ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದರು.
ತಾ.ಪಂ.ಸದಸ್ಯೆ ಶಾಮಲ ಮಹಾಂತೇಶ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಕಟಿಗಿ ಬಸಮ್ಮ, ಸದಸ್ಯರಾದ ಈಶಣ್ಣ, ಮಲ್ಲಿಕಾರ್ಜುನ, ವೀರೇಶ, ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯಾಧಿಕಾರಿ ತಿಮ್ಮರಾಜು, ಅರಣ್ಯ ಉಪವಲಯಾಧಿಕಾರಿ ಕರಿಬಸಪ್ಪ, ಕೊಟ್ರಗೌಡ, ಹೊಸಪೆಟೆಯ ಪುಷ್ಪಾವತಿ, ಮತ್ತೊಬ್ಬ ಸಂಪನ್ಮೂಲವ್ಯಕ್ತಿ ವಿಶ್ವನಾಥ, ಅರಣ್ಯ ಪ್ರೇರಕರಾದ ಸರ್ಪಭೂಷಣ, ಈಶ್ವರನಾಯ್ಕ, ಸಿಬ್ಬಂದಿಗಳಾದ ರಜಕ್ ಹಾಗೂ ಬಸವರಾಜ್ ಇದ್ದರು. ಅರಣ್ಯ ರಕ್ಷಕಿ ಲಿಲಾವತಿ.ಎಂ. ರವಿಸ್ವಾಮಿ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








