ಹಾವೇರಿ:
ಚೈನ್ ಹಾಗೂ ಬೆಲೆ ಆಳುವ ವಸ್ತುಗಳನ್ನು ಕದಿಯುತ್ತಿದ್ದ ಐದು ಕುಖ್ಯಾತ ಕಳ್ಳರನ್ನು ಆಡೂರ ಪೊಲೀಸ್ ಠಾಣಾ ಸಿಬ್ಬಂದಿಗಳು ಬಂಧಿಸಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೆ.ಜಗದೀಶ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜಾ ಹುಸೇನ್ಸಾಬ್ ಬೋಸ್ಲೆ, ಸುರೇಶ ಕೃಷ್ಣಪ್ಪ ಪವಾರ, ಸಂತೋಷ ಕೃಷ್ಣಪ್ಪ ಪವಾರ, ವೀರಭದ್ರಯ್ಯ ನಿಂಗಯ್ಯ ಪ್ಯಾಟಿಮಠ, ತಿಮ್ಮಪ್ಪ ನಾಗಪ್ಪ ವಡ್ಡರ ಎಂಬ ಕಳ್ಳರನ್ನು ಬಂಧಿಸಲಾಗಿದೆ.
ಬಂಧಿತರಿಂದ 370 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿ ಆಭರಣ ಮೊಬೈಲ್ ಪೋನ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳು. ಜಿಲ್ಲೆಯ ಹಾನಗಲ್, ಆಡೂರ ಮತ್ತು ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಶಿಗ್ಗಾವಿ ವೃತ್ತ ಸಿಪಿಐ ಆರ್.ಎಫ್.ದೇಸಾಯಿ ಹಾಗೂ ಹಾನಗಲ್ ವೃತ್ತ ಸಿಪಿಐ ಪ್ರವೀಣ ನೀಲಮ್ಮನವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಕರಣ ಭೇದಿಸಿದ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ