ಬೆಂಗಳೂರು
ವಿವೋ ಮೊಬೈಲ್ ಶೋರೂಂನಲ್ಲಿದ್ದ ದುಬಾರಿ ಬೆಲೆಯ ಸುಮಾರು 40 ಮೊಬೈಲ್ ಫೋನ್‍ಗಳನ್ನು ಕಳ್ಳರ ಗ್ಯಾಂಗ್ ರೋಲಿಂಗ್ ಶೆಟರ್ ಮುರಿದು ಒಳನುಗ್ಗಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುಬ್ರಹ್ಮಣ್ಯಪುರದ ಉತ್ತರಹಳ್ಳಿಯ ರಸ್ತೆಯಲ್ಲಿ ಸಾಗುವರಿಗೆ ಕಾಣಬಾರದು ಎನ್ನುವ ಕಾರಣಕ್ಕೆ ಕಳ್ಳರ ಗ್ಯಾಂಗ್‍ನಲ್ಲಿದ್ದ ಮೂವರು ಶೋರೂಂ ಬಾಗಿಲಿಗೆ ಬೆಡ್‍ಶೀಟ್ ಅಡ್ಡ ಹಿಡಿದರೆ ಇನ್ನಿಬ್ಬರು ರೋಲಿಂಗ್ ಶೆಟರ್ ಮುರಿದು ಒಳನುಗ್ಗಿ ಮೊಬೈಲ್‍ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳ್ಳರ ದೃಶ್ಯವು ಶೋರೂಂನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಟ್ಟು ಆರು ಮಂದಿ ಖದೀಮರು ಈ ಕಳ್ಳತನದಲ್ಲಿ ಭಾಗಿಯಾಗಿದ್ದು, ಉತ್ತರಹಳ್ಳಿಯ ವಿವೋ ಬ್ರಾಂಡ್ ಮೊಬೈಲ್ ಶೋರೂಂನಲ್ಲಿ ಈ ಘಟನೆ ನಡೆದಿದೆ.
ದಾರಿಹೋಕರ ಸೋಗಿನಲ್ಲಿ ಗುರುವಾರ ನಸುಕಿನಲ್ಲಿ 6 ಮಂದಿ ಕಳ್ಳ ಗ್ಯಾಂಗ್ ಶೋರೂಂ ಬಳಿ ಬಂದಿದ್ದು ಶೋರೂಂ ಬಾಗಿಲಿಗೆ ಇಬ್ಬರು ಬೆಡ್‍ಶೀಟ್ ಅಡ್ಡ ಹಿಡಿದರೆ, ಇನ್ನುಳಿದವರು ಬಾಗಿಲನ್ನು ಒಡೆದು ಮೊಬೈಲ್ ಶೋರೂಂನಲ್ಲಿದ್ದ ಅಷ್ಟೂ ಫೋನ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಉತ್ತರಹಳ್ಳಿ ಜೂಹು ಲಿಬಿನ್, ಲಿಯೂ ಹಾಗು ಜಿಂಗ್ಲಿಯವರಿಗೆ ಸೇರಿದ ಮೊಬೈಲ್ ಶೋರೂಂ ಇದಾಗಿದ್ದು, ಸುಮಾರು ಐದು ಲಕ್ಷ ಬೆಲೆಬಾಳುವ 40 ಮೊಬೈಲ್ ಫೋನುಗಳ ಕಳ್ಳತನವಾಗಿದೆ.ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ