ಹೊಳಲ್ಕೆರೆ:
ಶ್ರೀನಗರ ಸಮೀಪದಲ್ಲಿ ಬೈತ್ಪಾದಕರ ದಾಳಿಗೆ 44 ಯೋಧರು ಹುತಾತ್ಮರಾಗಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸಾಂಕೇತಿಕವಾಗಿ ಸರ್ಕಾರದ ಆದೇಶದಂತೆ 280ನೇ ಸೇವಾಲಾಲ್ ಜಯಂತಿ ಸಾಂಕೇತಿಕವಾಗಿ ಸೇವಾಲಾಲ್ ಭಾವ ಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ತಹಶೀಲ್ದಾರ್ ಕೆ.ನಾಗರಾಜ್ ಮಾತನಾಡಿದರು.ಧರ್ಮಸ್ಥಳದಲ್ಲಿ 3 ದಿನ ಸೇವಾಲಾಲ್ ಜಯಂತಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಆದ್ದರಿಂದ ಇದೇ ತಿಂಗಳು 26 ರಂದು ತಾಲ್ಲೂಕಿನಲ್ಲಿ ವಿಜೃಂಭಣೆಯಿಂದ ಸೇವಾಲಾಲ್ ಜಯಂತಿ ಆಚರಿಸುತ್ತೇವೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ ಹಾಗಾಗಿ ಸಾಂಕೇತಿಕವಾಗಿ ಆಚರಿಸುತ್ತಿದ್ದೇವೆ ಎಂದು ತಹಶೀಲ್ದಾರ್ ತಿಳಿಸಿದರು.ಈ ಸಂದರ್ಭದಲ್ಲಿ ಖಜಾನ ಇಲಾಖಾಧಿಕಾರಿ ಬೈಯಣ್ಣ, ಸಿಡಿಪಿಓ ಲೋಕೇಶಪ್ಪ, ಉಪತಹಶೀಲ್ದಾರ್ ಗಾಯತ್ರಮ್ಮ ಕಚೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.