ಶ್ರೀನಗರ :
ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಸೇನೆಯ 44 ವೀರ ಯೋಧರು ಹುತಾತ್ಮರಾಗಿದ್ದರು ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ ಈ ಕೃತ್ಯಕ್ಕೆ ಕಾರಕ ಮತ್ತು ಆತ್ಮಾಹುತಿ ಬಾಂಬರ್ ಆಗಿದ್ದ ಉಗ್ರ ಆದಿಲ್ ಅಹಮದ್ ದಾರ್ ತಂದೆ ಕೂಡ ಘಟನೆಗೆ ವಿಷಾಧಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ನನ್ನ ಮಗನ ಸಾವಿಗೂ ನೋವಿದೆ. ಆದರೆ ಇಲ್ಲಿ 44 ಯೋಧರು ಹುತಾತ್ಮರಾಗಿದ್ದೂ ನನಗೆ ಅಷ್ಟೇ ನೋವು ಉಂಟಾಗಿದೆ ಎಂದು ಹೇಳಿದ್ದಾರೆ.
ಹಿನ್ನೆಲೆ:
ಉಗ್ರ ಆದಿಲ್ ಕೆಲ ವರ್ಷಗಳ ಹಿಂದೆ ಸೇನೆಯಿಂದ ಥಳಿಸಲ್ಪಟ್ಟಿದ್ದ, ಬಳಿಕ ಆತ ಸೇನೆಯವಿರುದ್ಧ ರೊಚ್ಚಿಗೆದ್ದು ಉಗ್ರನಾದ ಎಂದು ತಿಳಿಸಿದ್ದಾರೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಕೂಡ ಇಂತಹ ಸಮಸ್ಯೆಗಳು ಮುಂದುವರಿಯುತ್ತಲೇ ಇರುತ್ತದೆ. ಆದ್ದರಿಂದ ಈ ಬಗ್ಗೆ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಆದಿಲ್ 2016 ರಲ್ಲಿ ಗೆಳೆಯನ ಜೊತೆಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಪೊಲೀಸರು ಏಕಾಏಕಿ ಈತನನ್ನು ತಡೆದು ಥಳಿಸಿದ್ದರು. ಕಲ್ಲು ತೂರಾಟದ ಆರೋಪದಲ್ಲಿ ಈತನ ಮೇಲೆ ಹಲ್ಲೆ ನಡೆದಿತ್ತು ಎಂದಿದ್ದಾರೆ.ಇದನ್ನೆ ಮನಸ್ಸಿನಲ್ಲಿಟ್ಟುಕೊಂಡು ಈ ಕೃತ್ಯ ಎಸಗಿದ್ದಾನೆ ಮತ್ತು ಆತ ಉಗ್ರವಾದದ ಸಿದ್ದಾಂತಗಳಿಗೆ ಮಾರು ಹೋಗಿದ್ದ ಎಂದು ವರ ತಂದೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








