ಹಿರಿಯೂರು :
ನಗರದ ಹರಿಶ್ಚಂದ್ರಘಾಟ್ ಸರ್ಕಾರಿಶಾಲೆ ಆವರಣದಲ್ಲಿ ಖಾಸಗಿಯವರು ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ಈ ಕೊಡಲೆ ತೆರವುಗೊಳಿಸಬೇಕು ಎಂಬುದಾಗಿ ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ಬಿಇಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆ, ಬಾಲಕಿಯರ ಜೂನಿಯರ್ ಕಾಲೇಜು, ಗುರುಭವನದ ಬಳಿಯಲ್ಲಿ ಪುಟ್ ಪಾತ್ ಮೇಲೆ ತರಕಾರಿ ಅಂಗಡಿಗಳು, ಟೀ ಹೋಟೆಲ್‍ಗಳು ಸೇರಿದಂತೆ ಹಲವು ಅಂಗಡಿಗಳನ್ನು ಖಾಸಗಿಯವರು ಅಕ್ರಮವಾಗಿ ಆರಂಭಿಸಿರುವ ಕಾರಣ ಪಾದಚಾರಿಗಳು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹರಿಶ್ಚಂದ್ರ ಘಾಟ್ ಸರ್ಕಾರಿ ಶಾಲೆ ಆವರಣದಲ್ಲಿ ಕೆಲವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಘಾಟ್ ರವಿ ದೂರಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿನೀಡಿದ ನಗರಸಭೆ ಅಧ್ಯಕ್ಷೆ ಮಂಜುಳ ಹಾಗೂ ಸದಸ್ಯರಾದ ಪ್ರೇಮ್‍ಕುಮಾರ್, ತಾಲ್ಲೂಕು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ನಗರಸಭೆ ಆಯುಕ್ತ ಮಹಂತೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ಇವರುಗಳು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಪ್ರಯುಕ್ತ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಪ್ರತಿಭಟನೆಯಲ್ಲಿ ತಾಲೂಕು ದಲಿತಸೇನೆ ಅಧ್ಯಕ್ಷ ಚಂದ್ರಶೇಖರ್, ವೆಂಕಟೇಶ್, ಶೇಕ್‍ಬುಡೇನ್, ಪಾಂಡುರಂಗ, ಪ್ರಭಾಕರ್, ಮಹಂತೇಶ್, ಲತೀಫ್‍ಸಾಬ್, ಓಬಳೇಶ್, ಮಂಜುನಾಥ್, ರಾಮದಾಸ್, ರತ್ನಮ್ಮ, ಪರ್ವಿನ್, ಗೀತಮ್ಮ, ರುಕ್ಕುಬಾಯಿ, ನಿಂಗಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








