ಹಾವೇರಿ :
ಸಿಆರ್ಪಿಎಪ್ ಯೋಧರ ವಾಹನ ಮೇಲೆ ಆತ್ಮಾಹುತಿ ಬಾಂಬ್ ಸಿಡಿಸಿ 40 ಕ್ಕೂ ಯೋಧರನ್ನು ಬಲಿ ತಗೆದುಕೊಂಡ ಭಯೋತ್ಪಾದಕರ ವಿರುದ್ಧ ನಗರದ ಮುಸ್ಲಿಂ ಜನಾಂಗದ ಮುಖಂಡರು ದಿಕ್ಕಾರ ಕೂಗಿ ಭಯೋತ್ಪಾದಕರನ್ನು ಸರ್ವನಾಶ ಮಾಡಿ ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.
ಇಂತಹ ಘೋರ ಘಟನೆ ದೇಶದ ಜನರನ್ನೆ ಬೆಚ್ಚಿಬಿಳಿಸಿದೆ. ಉಗ್ರರ ಅಟ್ಟ ಹಾಸವನ್ನು ಮಟ್ಟಾ ಹಾಕಬೇಕು. ಮುಸ್ಲಿಂ ಮುಖಂಡರು ಮತ್ತು ಮೌಲ್ವಿಗಳು ಶನಿವಾರದಂದು ದರ್ಗಾದಿಂದ ಹೊಸಮನಿ ಸಿದ್ಧಪ್ಪ ವೃತ್ತದ ವರೆಗೂ ಪಾದಯಾತ್ರೆ ಮಾಡಿ ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನ ವಿರುದ್ಧ ದಿಕ್ಕಾರ ಕೂಗಿದರು. ಇಂತಹ ಘೋರ ದುರ್ಘಟನೆ ಮಾಡಿರುವ ಭಯೋತ್ಪಾದಕರನ್ನು ಸುಟ್ಟುಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿ ಬಾಂಬ್ ದಾಳಿಯಲ್ಲಿ ವೀರಮರಣ ಅಪ್ಪಿದ ಯೋಧರಿಗೆ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ವ್ಯಾಪಕ ಖಂಡನೆ ಮಾಡಿರುವ ವಿವಿಧ ಸಂಘಟನೆಗಳು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಭಾವಪೂರ್ವಕ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಬುಸಾಬ ಮೊಮ್ಮಿನಗಾರ, ರಿಯ್ಯಾಜಅಹ್ಮದ ಶಿಡಿಗನಾಳ, ಅಮೀರಜಾನ ಬೇಪಾರಿ, ಮಮ್ಮದಹುಸೇನ ದೇವಿಹೊಸುರ, ಶಾಹೀದ ದೇವಿಹೊಸೂರ, ಇಮ್ರಾನ್ ಹುಬ್ಬಳ್ಳಿ.ಜಾಕೀರಹುಸೇನ್ ನದಾಫ್. ನಜೀರಸಾಬ ನದಾಪ್, ಮಹಬೂಲಿ ನಾರಂಗಿ, ಮತ್ತು ಮದರಸಾ ಮೌಲಾನಗಳು ಪಾಲ್ಗೊಂಡಿದ್ದರು.