ಚಿತ್ರದುರ್ಗ:
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ವಿದ್ಯಾಸಂಸ್ಥೆ ಹಾಗೂ ರೋಟರಿ ಕ್ಲಬ್ ಇವುಗಳ ಸಹಯೋಗದೊಂದಿಗೆ ವಾಸವಿ ಶಾಲೆಯಲ್ಲಿ ಭಾನುವಾರ ರೋಟರಿ ಹಾಗೂ ವಾಸವಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಒಂದು ಸಂಭ್ರಮ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸದುರ್ಗದ ಸಂಪನ್ಮೂಲ ವ್ಯಕ್ತಿ ನವೀನ್‍ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪರೀಕ್ಷೆಯನ್ನು ನೀವುಗಳು ಶತ್ರ ಎಂದು ಪರಿಗಣಿಸಿದರೆ ವರ್ಷವಿಡಿ ಕಲಿತ ಪಾಠಗಳೆಲ್ಲಾ ಮರೆತು ಹೋಗುತ್ತದೆ. ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಬೂತ ಎಂದುಕೊಳ್ಳಬೇಡಿ. ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನು ಸಂಭ್ರಮಿಸಿ ಸವಿದರೆ ನೀವು ಇಟ್ಟುಕೊಂಡ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಕೇವಲ ಪರೀಕ್ಷೆಗಾಗಿ ಓದುವುದು ಹವ್ಯಾಸ ಒಳ್ಳೆಯದಲ್ಲ. ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ಹೆದುರಿಸುವಂತ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಶಿಕ್ಷಣ ಕೊಡಬೇಕಿದೆ. ಪ್ರಶ್ನೆಗಳನ್ನು ಕೇಳುವ ಜಾಗೃತಿ ಮೂಡಿಸಿಕೊಂಡು ನಿಮ್ಮ ಮನಸ್ಸಿನಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಸಂಕೋಚಪಟ್ಟುಕೊಂಡು ಸುಮ್ಮನೆ ಕುಳಿತರೆ ನಿಮಗೆ ನೀವೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ದೊಡ್ಡ ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೆ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಪರೀಕ್ಷೆ ಒಂದು ಸಂಭ್ರಮ ಎನ್ನುವುದರ ಜೊತೆಗೆ ಆಧ್ಯಾತ್ಮಿಕ ಆಂತರಿಕವಾಗಿ ನಿಮ್ಮನ್ನು ನೀವು ಮೊದಲು ಪ್ರಶ್ನೆ ಮಾಡಿಕೊಳ್ಳಿ. ಪರೀಕ್ಷೆಯೆಂಬ ಭಯ, ಒತ್ತಡದಿಂದ ಮೊದಲು ಹೊರಬನ್ನಿ. ಇಲ್ಲವಾದಲ್ಲಿ ನೀವು ಕಲಿತ ಎಲ್ಲಾ ಪಾಠಗಳು ಮರೆತುಬಿಡಬಹುದು. ಎಂತಹ ಕಠಿಣ ಸಂದರ್ಭದಲ್ಲಿಯೂ ನೀವು ಕೀಳರಿಮೆಯನ್ನು ಇಟ್ಟುಕೊಳ್ಳಬಾರದು. ಪೋಷಕರುಗಳು ಕೂಡ ಮಕ್ಕಳ ಮೇಲೆ ನಂಬಿಕೆಯಿಡಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ಯದರ್ಶಿ ಸಿ.ಜಿ.ರೇವಣಸಿದ್ದಪ್ಪ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖ ಸಂತೋಷ್, ಕಾರ್ಯದರ್ಶಿ ಸವಿತ, ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಜಯಶ್ರಿಷಾ, ಇನ್ನರ್‍ವೀಲ್ ಚೇರ್ಮನ್ ಶ್ರೀಲತದೊಂತಿ, ಮಹೇಶ್, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








