ಹಾನಗಲ್ಲ :
ಸದ್ಗುರು ಸಂತ ಸೇವಾಲಾಲರು ಒಳ್ಳೆಯದನ್ನು ಆಲಿಸು, ಸ್ವೀಕರಿಸು ಎಂಬ ಸಂದೇಶ ಸಾರಿ ಜಗಜ್ಯೋತಿ ಬಸವಣ್ಣನವರಂತೆ ಸಮಾಜದ ಉನ್ನತಿಗೆ ಬದುಕನ್ನು ನೀಡಿದ ಮಹಾತ್ಮರು ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.
ಸೋಮವಾರ ಹಾನಗಲ್ಲಿನ ಶ್ರೀಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಸಂತ ಸೇವಾಲಾಲ ಜಯಂತ್ಯುತ್ಸವ ಸಮಿತಿ ಆಯೋಜಿಸಿದ ಸಂತ ಸೇವಾಲಾಲ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ವಿಚಾರ ಧಾರೆಗಳು ಸಮಾಜಕ್ಕೆ ಒಳಿತನ್ನೇ ಹೇಳಿವೆ. ಎಲ್ಲ ಜಾತಿ ಜನಾಂಗಗಳನ್ನು ಸಮಾನವಾಗಿ ಕಾಣುವ ಸತ್ಯ ಅಹಿಂಸೆಯನ್ನೂ ಬೋಧಿಸಿದ್ದಾರೆ. ಇಡೀ ಭಾರತವನ್ನು ಸಂಚರಿಸಿ ತಮ್ಮ ಜೀವನಾನುಭವಗಳನ್ನು ಸಾರಿದ್ದಾರೆ. ತಮ್ಮನ್ನು ನಂಬಿರುವ ಜನಾಂಗದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅವರು ಸಾಧಕರು, ತಪಸ್ಸು ಧ್ಯಾನ ಆಧ್ಯಾತ್ಮಿಕ ಚಿಂತನೆ ಮೂಲಕ ಗಮನಾರ್ಹ ವ್ಯಕ್ತಿಕ್ತವ ಹೊಂದಿದವರಾಗಿದ್ದಾರೆ. ಸಾಂಸ್ಕøತಿಕ ನಾಯಕ ದಾರ್ಶನಿಕರಾಗಿದ್ದ ಅವರು 280 ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಯಾವುದೇ ಸಮಾಜ ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ಒಳ್ಳೆಯ ಭವಿಷ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಂಸ್ಕøತಿ ಆಚಾರ ವಿಚಾರಗಳು ಬದಲಾಗುತ್ತಿವೆ. ಆದರೆ ಬಂಜಾರ ಸಮುದಾಯ ಒಗ್ಗಾಟ್ಟಗಬೇಕು. 17 ನೇ ಶತಮಾನದಲ್ಲಿದ್ದ ಮೂಡ ನಂಬಿಕೆಗಳು ದೂರ ಮಾಡಿರುವ ಸದ್ಗುರು ಸೇವಾಲಾಲರು ಒಬ್ಬ ಕವಿಯಾಗಿದ್ದರಲ್ಲದೆ ಸಮಾಜಕ್ಕಾಗಿ ಸದಾ ತುಡಿತ ಹೊಂದಿದವರಾಗಿದ್ದರು. ಎಲ್ಲ ಹೋರಾಟಗಳಲ್ಲಿ ಅವರದು ಮೊದಲ ಹೆಜ್ಜೆಯಾಗಿತ್ತು. ಶ್ರಮಜೀವನವನ್ನು ಸಂದೇಶವಾಗಿ ನೀಡಿದವರು.
ಈ ಸಮುದಾಯವನ್ನು ಪರಿಶಿಷ್ಟ ರಾಜ್ಯಕ್ಕೆ ಸೇರಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಸಾಧ್ಯವಾಗಿದೆ. ಯುವ ಸಮುದಾಯ ಒಳ್ಳೆಯ ಶಿಕ್ಷಣ ಪಡೆದು ತಮ್ಮ ಪ್ರತಿಭೆಯನ್ನು ಮೆರೆಯಬೇಕು. ಶ್ರಮಿಕ ಬಂಜಾರ ಸಮುದಾಯವಲ್ಲದೆ ಪ್ರತಿ ಶೋಷಿತ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮುಖ್ಯ ಅತಿಥಿಯಾಗಿ ಮಾತನಾಡಿ ನಮ್ಮ ಅಧಿಕಾರದ ಅವಧಿಯಲ್ಲಿ ಬಂಜಾರ ಸಮುದಾಯಕ್ಕೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಸಮಾಜದಲ್ಲಿ ಉತ್ತಮ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಂಜಾರ ಸಮುದಾಯದ ಬಡಾವಣೆಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರು, ಶೈಕ್ಷಣಿಕ ಸೌಲಭ್ಯ, ವಿದ್ಯುತ್ ಸಂಪರ್ಕ ಸೇರಿದಂತೆ ಅವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿದ ತೃಪ್ತಿ ನನಗಿದೆ ಎಂದರು.
ಬಂಜಾರ ಸಮುದಾಯದ ತಪ್ಪೇಸ್ವಾಮಿಜಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಸಮಾಜದ ಅದ್ಯಕ್ಷ ದೇವೇಂದ್ರಪ್ಪ ಲಮಾಣಿ, ಕಲಾವತಿ ಚಹ್ವಾಣ, ಕಲ್ಯಾಣಕುಮಾರ ಶೆಟ್ಟರ, ಮಮತಾ ಲಮಾಣಿ, ಸೋಮನಾಥ ಚಹ್ವಾಣ, ದಾನಪ್ಪ ಲಮಾಣಿ, ಸುರೇಶ ನಾಯಕ್, ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೇರ,. ಉಮಾ ಲಮಾಣಿ, ಕುಮಾರ ಗುಂಡೂರ, ರಾಮಪ್ಪ ಲಮಾಣಿ, ತರುಣ ಲಮಾಣಿ, ಬೀಮಣ್ಣ ಲಮಾಣಿ, ತಪ್ಪಣ್ಣ ಕೊಪ್ಪದ, ಬಸವಂತ ನಾಯಕ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.