ಚಿತ್ರದುರ್ಗ;
ಭರಮಸಾಗರದಲ್ಲಿ ಫೆ. 17 ರಂದು 7ನೇ ವರ್ಷದ ಪಾಳೇಗಾರರ ನೆನಪಿನೋತ್ಸವ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇದರ ಅಂಗವಾಗಿ ಭರಮಸಾಗರದ ಪ್ರಮುಖ ಬೀದಿಗಳಲ್ಲಿ ಜಿಲ್ಲಾ ಜಾನಪದ ಕಲಾ ಮಂಡಲದ ಕಲಾವಿದರಿಂದ ಖಾಸಾಬೇಡರ ಪಡೆ ಕುಣಿತ ಪ್ರದರ್ಶಿಸಲಾಯಿತು.
ಖಾಸಾಬೇಡರ ಪಡೆ ಕಲಾವಿದರು ಬಿಳಿ ಪಂಬೆ, ಕರಿ ಕಂಬಳಿ, ಬಿಳಿಪೇಟ ಧರಿಸಿ ತಮಟೆವಾದ್ಯದ ಗತ್ತಿಗೆ ಕುಣಿಯುತ್ತಾ ಸಾಗಿದರು. ಜೊತೆಗೆ 77 ಪಾಳೇಗಾರರ ವೇಷಧಾರಿಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ನೀಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ, ಚಿತ್ರದುರ್ಗ ಇವರು ಜಾನಪದ ತಂಡವನ್ನು ಪ್ರಾಯೋಜಿಸಿದ್ದರು.
ಚಿತ್ರದುರ್ಗದ ಪಾಳೇಗಾರರ ಕಾಲದಲ್ಲಿದ್ದ ಖಾಸಾಬೇಡರಪಡೆ ಯುದ್ದ ಕಲೆಯಲ್ಲಿ ನೈಪೂರ್ಣ ಹೊಂದಿತ್ತು. ಆನೆಮೇಲೆ ಕುಳಿತು ಯುದ್ದ ಮಾಡುವುದು, ಕುದುರೆ ಮೇಲೆ ಕುಳಿತು ಯುದ್ದ ಮಾಡುವುದು. ಫಿರಂಗಿ ಉಡಾಯಿಸುವುದು ಹಾಗೂ ಚಿತ್ರದುರ್ಗದ ಆಡಳಿತದಲ್ಲಿಯೂ ಮೇಲುಗೈ ಸಾಧಿಸಿತ್ತು. ರಾಜಾಭರಮಣ್ಣ ನಾಯಕ, ರಾಜಾವೀರ ಮದಕರಿನಾಯಕರ ಕಾಲದಲ್ಲಿ ಖಾಸಾಬೇಡರ ಪಡೆ ಪ್ರಮುಖವಾಗಿತ್ತು. ಯುದ್ದದಿಂದ ಗೆದ್ದುಬಂದ ನಂತರ ಖಾಸಾಬೇಡರ ಪಡೆ ಕುಣಿಯುತ್ತಾ ಬರುತ್ತಿತ್ತು. ಅದು ಇಂದು ಜಾನಪದ ಕಲೆಯಾಗಿ ಪ್ರದರ್ಶನವಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ