ದಾವಣಗೆರೆ:
ಬೆಣ್ಣೆ ನಗರಿ ದಾವಣಗೆರೆಯ ವಿಶೇಷತೆಗಳ ಕುರಿತು ಯುವ ತಂಡ ತಯಾರಿಸಿರುವ “ಇಟ್ಸ್ ದಾವಣಗೆರೆ” ಆಲ್ಬಂ ಸಾಂಗ್ ಅನ್ನು ಯುಟ್ಯೂಬ್ ಬ್ರಾಂಡ್ ಸ್ಟುಡಿಯೋ ಚಾನೆಲ್ನಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ತಂಡದ ಹಾಲೇಶ್, ದಾವಣಗೆರೆಯ ವಿಶೇಷತೆಗಳ ಬಗ್ಗೆ ತಯಾರಿಸಿರುವ “ಇಟ್ಸ್ ದಾವಣಗೆರೆ” ಆಲ್ಬಂ ಹಾಡಿಗೆ ಕಾರ್ತಿಕ್ ರಚಿಸಿದ್ದು, ಕಾರ್ತಿಕ್ ಹಾಗೂ ಆಕಾಶ್ ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು 70 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಮೂರು ನಿಮಿಷದ ಹಾಡು ರ್ಯಾಪ್, ಸೆಮಿ ಕ್ಲಾಸಿಕಲ್, ರಾಕ್ ಬ್ಯಾಂಡ್ ಶೈಲಿಯಲ್ಲಿ ಚಿತ್ರಿಕರಣಗೊಂಡಿದ್ದು, ದಾವಣಗೆರೆಯನ್ನು ಉತ್ತಮವಾಗಿ ತೋರಿಸುವ ಉದ್ದೇಶದಿಂದ ಆಲ್ಬಂ ಹಾಡು ನಿರ್ಮಿಸಲಾಗಿದೆ. ಬೆಣ್ಣೆ ದೋಸೆ, ಗಾಜಿನ ಮನೆ, ಸೂಳೆಕೆರೆ, ಇಂಜಿನಿಯರಿಂಗ್ ಕಾಲೇಜುಗಳು ಸೇರಿ ವಿವಿಧ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ತಂಡದ ಕಾರ್ತಿಕ್, ಸುಕೃತ, ವಿಷು ಕ್ರೇನಿ, ಸುಷ್ಮಿತಾ, ಸನತ್, ಆಕಾಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
