ರಾಜ್ಯಮಟ್ಟದ ಕಾಡುಗೊಲ್ಲರ ಸಮಾವೇಶ

ಚಿತ್ರದುರ್ಗ

      ರಾಜ್ಯ ಮಟ್ಟದ ಕಾಡುಗೊಲ್ಲರ ಸಮಾವೇಶವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದು ದಿನಾಂಕವನ್ನು ನಿಗಧಿ ಮಾಡುವ ಸಲುವಾಗಿ ಫೆ. 23 ರಂದು ಪೂರ್ವಬಾವಿ ಸಭೆಯನ್ನು ಕರೆಯಲಾಗಿದೆ ಎಂದು ಜನಾಂಗದ ಮುಖಂಡ ಹಾಗೂ ಮಾಜಿ ಶಾಸಕ ಎ.ವಿ.ಉಮಾಪತಿ ತಿಳಿಸಿದರು

       ರಾಜ್ಯದಲ್ಲಿ ಗೊಲ್ಲರ ಸಂಖ್ಯೆ ಹೆಚ್ಚಾಗಿದ್ದು ಕೆಲವಡೆ ನಿರ್ಣಾಯಕ ಪಾತ್ರದಲ್ಲಿದ್ದರೂ ಸಹಾ ರಾಜಕೀಯ ಪಕ್ಷಗಳು ನಮ್ಮನ್ನು ಗುರುತಿಸುತ್ತಿಲ್ಲ, 224 ಶಾಸಕರಲ್ಲಿ ಕೇವಲ ಒಬ್ಬರು ಮಾತ್ರ ಶಾಸಕರಿದ್ದಾರೆ, ರಾಜಕೀಯ ಪ್ರಾತಿನಿಧ್ಯ ಸಿಗದೇ ಸಮಾಜದ ಪ್ರಗತಿಯೂ ಸಹಾ ಸಾಧ್ಯವಿಲ್ಲ ಇದರಿಂದ ರಾಜ್ಯದ ಮಧ್ಯ ಭಾಗವಾದ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲು ತೀರ್ಮಾನ ಮಾಡಿದ್ದು ಇದರಲ್ಲಿ ಸಮಾಜದ ಎಲ್ಲಾ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

       ಫೆ, 23 ರ ಬೆಳಿಗ್ಗೆ 11 ಗಂಟಗೆ ನಗರದ ವಿ.ಪಿ.ಬಡಾವಣೆಯಲ್ಲಿನ ಉಮಾಪತಿ ಕಲ್ಯಾಣ ಮಂಟಪದಲ್ಲಿ ಪೂರ್ವ ಬಾವಿ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ರಾಜ್ಯದ ಜನಾಂಗದ ಮುಖಂಡರು ಭಾಗವಹಿಸುವುದರ ಮೂಲಕ ಚಿತ್ರದುರ್ಗದಲ್ಲಿ ನಡೆಯುವ ಸಮಾವೇಶದ ದಿನಾಂಕವನ್ನು ನಿರ್ಧಾರ ಮಾಡಲಾಗುತ್ತದೆ, ತದ ನಂತರ ಮುಂದಿನ ಕಾರ್ಯಕ್ರಮಗಳು ನಡೆಯಲಿದ್ದು, ಸಮಾವೇಶದಲ್ಲಿ ಜನಾಂಗದ ಸಾಂಸ್ಕøತಿಕ ಮತ್ತು ರಾಜಕೀಯ ಜನ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದರು

        ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಗೊಲ್ಲ ಜನಾಂಗ ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಹಾ ರಾಜಕೀಯ ಪಕ್ಷಗಳು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ನೀಡುವಲ್ಲಿ ಎಡವಿದ್ದರಿಂದ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ಕಾಂಗ್ರೇಸ್ ಕಳೆದುಕೊಳ್ಳಬೇಕಾಯಿತು, ಇದನ್ನು ಗಮನದಲ್ಲಿಟ್ಟುಕೂಂಡು ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಜನಾಂಗವನ್ನು ಕಡೆಗಣಿಸಿದರೆ ಇದು ಸಹಾ ಏರು ಪೇರಾಗುವ ಲಕ್ಷಣಗಳು ಕಂಡು ಬರುತ್ತದೆ ಎಂದು ಎಚ್ಚರಿಸಿದರು.

        ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಜಯಮ್ಮ ಮಾತನಾಡಿ, ಹಿಂದಿನ ಸರ್ಕಾರ ನಮ್ಮ ಜನಾಂಗಕ್ಕೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದೆ ಅದೇ ರೀತಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದ್ದಾರೆ ಅದರಂತೆ ಶಿಕ್ಷಣವನ್ನು ಪಡೆಯುವುದರ ಮೂಲಕ ಜ್ಞಾನವನ್ನು ಸಂಪಾದನೆ ಮಾಡಬೇಕಿದೆ ಎಂದ ಅವರು, ನಮ್ಮ ಸಂಪ್ರದಾಯ ಸಂಸ್ಕøತಿ ಇನ್ನು ಜೀವಂತವಾಗಿದೆ ಅದನ್ನು ಮುಂದಿನ ಪೀಳಿಗೆಗೆ ಸಹಾ ಮುಂದುವರೆಸುವ ಜವಾಬ್ದಾರಿ ಎಲ್ಲೆ ಮೇಲಿದೆ ಎಂದು ತಿಳಿಸಿದರು.

        ಗೊಲ್ಲ ಜನಾಂಗದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಸರ್ಕಾರ ಅಲೆಮಾರಿಗಳಿಗೆ ವಿವಿಧ ರೀತಿ ಸೌಲಭ್ಯಗಳನ್ನು ಜಾರಿ ಮಾಡಿದರು ಅದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಮೂರಾರ್ಜಿ ದೇಸಾಯಿ ಯಂತಹ ಶಾಲೆಗಳಲ್ಲಿ ಪರೀಕ್ಷೆ ಇಲ್ಲದೆ ಸೀಟು ನೀಡಬೇಕೆಂದು ಒದ್ದರು ಸಹಾ ಅದನ್ನು ಯಾರು ಸಹಾ ಪಾಲಿಸುತ್ತಿಲ್ಲ ಇದರ ಬಗ್ಗೆ ತಿಳಿಸಿದರು ಸಹಾ ಗಮನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

       ಗೋಷ್ಟಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಹನುಮಂತಪ್ಪ, ವೆಂಕಟೇಶ್, ಚಿತ್ತಪ್ಪ ಸಿದ್ದೇಶ್‍ಯಾದವ್ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link