ಪಾಕ್ ಪಂದ್ಯ ಆಡದಿರುವುದು ‘ಯುದ್ಧ ಮಾಡದೇ ಶರಣಾದಂತೆ’ – ತರೂರ್

ದೆಹಲಿ:

     ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡದಿರುವ ತೀರ್ಮಾನ ಮಾಡುವುದು ‘ಯುದ್ಧ ಮಾಡದೇ ಶರಣಾದಂತೆ’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.

     ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಹೊಣೆಯಾಗಿರುವುದರಿಂದ ಮುಂಬರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅದರೊಂದಿಗೆ ಪಂದ್ಯ ಆಡಬಾರದು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಅಲ್ಲದೇ ಭಾರತೀಯ ಕ್ರಿಕೆಟ್ ಮಂಡಳಿ ಸಹ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗದಂತೆ ವೇಳಾಪಟ್ಟಿ ಬದಲಿಸಲು ಒತ್ತಡ ಹೇರುವ ಪ್ರಯತ್ನ ನಡೆಸಿದೆ.  

       ಆದರೆ ಸಂಸದ ಶಶಿ ತರೂರ್ ಉಭಯ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅವರು ಸಮರ್ಥನೀಯ ಕಾರಣವನ್ನೂ ನೀಡಿದ್ದಾರೆ.

      1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಆಡಿತ್ತು. ಮತ್ತು ಪಂದ್ಯವನ್ನು ಕೂಡ ಗೆದ್ದುಕೊಂಡಿತ್ತು. ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಕೇವಲ ಎರಡು ಅಂಕಗಳನ್ನು ಕಳೆದುಕೊಳ್ಳುವ ವಿಚಾರವಾಗಲಾರದು. ಅದು ಶರಣಾಗತಿಯಾಗುವುದಕ್ಕಿಂತಲೂ ಹೀನಾಯವಾದದ್ದು. ಇದೊಂದು ರೀತಿ ನಾವು ಹೋರಾಟ ಮಾಡದೆಯೇ ಸೋತಂತೆ’ ಎಂದು ತರೂರ್ ಹೇಳಿದ್ದಾರೆ. 

      ನಾವು ಕ್ರಿಕೆಟ್‌ ಅನ್ನು ಬೇರೆ ಕ್ರಮಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಬಾರದು. ಸರ್ಕಾರ ಅದಕ್ಕೆ ಬದಲಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link