ಮೈಸೂರು:
ಫೋಟೋ ಶೂಟ್ ನಡೆಸುವ ವೇಳೆ ವಿದ್ಯಾರ್ಥಿಯೋರ್ವ ಸಾವಗೀಡಾದ ದುರ್ಘಟನೆ ಮೈಸೂರಿನ ನಗುನಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮೃತನನ್ನು ಮೈಸೂರಿನ ಪ್ರೀತಮ್ (15) ಎಂದು ಗುರುತಿಸಲಾಗಿದೆ. ನಿಂತಿದ್ದ ರೈಲಿನ ಮೇಲೆ ಫೋಟೋ ಶೂಟ್ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಫೋಟೋ ಫೋಸ್ ಕೊಡಲು ಹೋಗಿ ಬಾಲಕ ಪ್ರಾಣ ತೆತ್ತಿರುವುದು ದುರಂತ ಸಂಗತಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








