ಧಾರವಾಡ
ಕಾಶ್ಮೀರ ಕ್ಕೆ ನೀಡಲಾಗಿರುವ ವಿಶೇಷ ಅಧಿಕಾರದ ಕಲಂ ೩೭೦ ರದ್ದತಿಗೆ ಆಗ್ರಹ ಸೇರಿದಂತೆ ಮೂರು ನಿರ್ಣಯ ಗಳನ್ನು ಇಂದಿಲ್ಲಿ ಜರುಗಿದ ಕಚುಸಾಪ ಧಾರವಾಡ ತಾಲೂಕ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನ ಕರತಾಡನ ಮೂಲಕ ಅಂಗೀಕರಿಸಿತು.ಪಾಕಿಸ್ತಾನ ಕಲಾವಿದರನ್ನು ಬಾಲಿವುಡ್ ನಿರ್ಬಂಧಿಸಿದಂತೆ ಬಿ ಸಿ ಸಿ ಐ ವಿಶ್ವಕಪ್ ಕ್ರಿಕೆಟ್ ನ್ನು ಭಾರತ ಪಾಕ್ ಸಂಗಡ ಆಡುವಲ್ಲಿ ನಿಷೇಧಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸೌಲಭ್ಯಗಳನ್ನು ಸರಕಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿಗೂ ನೀಡಬೇಂದು ಆಗ್ರಹಿಸುವ ಒಮ್ಮತದ ನಿರ್ಣಯವನ್ನು ಕಾರ್ಯದರ್ಶಿ ಪ್ರಮೋದ ಜೋಶಿ ಮಂಡಿಸಿದರು. ಸರ್ವಾಧ್ಯಕ್ಷ ಮನೋಜ್ ಗೌಡ ಪಾಟೀಲ ಸೇರಿದಂತೆ ಸಮ್ಮೇಳನದ ಕವಿ ಕಲಾವಿದರು ಕರತಾಡನ ಮಾಡುವ ಮೂಲಕ ಅಂಗೀಕಾರ ನೀಡಿದರು. ಇದಕ್ಕೂ ಮುನ್ನ ಕವಿ ಸಿದ್ದಣ್ಣ ನೇಕಾರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಟಿ ಜರುಗಿತು.
ಮೂವತ್ತಕ್ಕೂ ಹೆಚ್ಚು ಕವಿಗಳು ಪುಲ್ವಾನ ಗಡಿಯಲ್ಲಿ ವೀರಮರಣ ಪಡೆದ ವೀರ ಯೋಧರ ಸ್ಮರಣೆಯ ಕವನ ಚುಟುಕು ವಾಚನ ಸಾದರಪಡಿಸಿದರು. ನಿರ್ದೇಶಕ ಗಂಗಯ್ಯ ಕುಲಕರ್ಣಿ ಕವನ ವಾಚನ ಮಾಡಿ ನಿರೂಪಣೆ ಮಾಡಿದರು. ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು , ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
