ಗುಬ್ಬಿ
ಪ್ರತಿ ವರ್ಷದಂತೆ ಈಭಾರಿಯೂ ಶ್ರಿಪುಣ್ಯ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿವತಿಯಿಂದ ಟಿ.ರಾಮಯ್ಯನವರ ನೇತೃತ್ವದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ತುಮಕೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 21 ನೇ ವರ್ಷದ ಪಾದಯಾತೆಯನ್ನು ಫೆ 23 ರಿಂದ ಮಾ 4 ರವರೆಗೆ ಹಮ್ಮಿಕೊಂಡಿದ್ದು ಗುಬ್ಬಿ ಪಟ್ಟಣಕ್ಕೆ ಪಾದಯಾತ್ರೆ ಆಗಮಿಸಿದಾಗ ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿದ ನಂತರ ಲಯನ್ಸ್ ಸಂಸ್ಥೆ ವತಿಯಿಂದ ಪಾದಯಾತ್ರಿಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಹೊರಟ ಪಾದಯಾತ್ರಿಗಳು ತಾಲ್ಲೂಕಿನ ಪತ್ರೆ ಮತ್ತಿಘಟ್ಟ ಗ್ರಾಮದ ಶ್ರೀಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ನಿಟ್ಟೂರು ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೊಡ್ಡಗುಣಿ ಶ್ರೀರೇವಣಸಿದ್ದೇಶ್ವರ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ ನಂತರ ಬೆಳಗ್ಗೆ ಕಿಬ್ಬನಹಳ್ಳಿ ಮಾರ್ಗವಾಗಿ ತಿಪಟೂರುಕಡೆ ಪಾದಯಾತ್ರೆ ಆರಂಭಿಸಲಿದ್ದಾರೆ.
ಪಾದಯಾತ್ರೆ ಸಂಚಾಲಕ ಡಿ.ಎಸ್.ಕುಮಾರಸ್ವಾಮಿ ಮಾತನಾಡಿ ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತುಮಕೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸುತ್ತಿದ್ದು ಸುಮಾರು ಐದು ನೂರಕ್ಕೂ ಹೆಚ್ಚು ಭಕ್ತಾಧಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಲಿದ್ದಾರೆ ಪಾದಯಾತ್ರಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಅಡುಗೆ ಸಾಮಗ್ರಿಗಳು, ಔಷಧಿಗಳು ಮತ್ತು ಹೊದಿಕೆ ಬಟ್ಟೆಗಳನ್ನು ನಾಲ್ಕು ವಾಹನಗಳಲ್ಲಿ ಪಾದಯಾತ್ರೆಯ ಜೊತೆಗೆ ಕೊಂಡೊಯ್ಯಲಾಗುತ್ತದೆ ಮಾರ್ಗಮಧ್ಯೆ ಅಡುಗೆ ತಯಾರಿಸಲು ಅಡುಗೆ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಪಾದಯಾತೆಯಲ್ಲಿ ವೈಧ್ಯರು, ವಕೀಲರು, ಮಹಿಳೆಯರು ಸೇರಿದಂತೆ ಭಕ್ತಾಧಿಗಳು ಭಾಗವಹಿಸುತ್ತಿದ್ದಾರೆ. ಪಾದಯಾತ್ರಿಗಳಿಗೆ ಯಾವುದೆ ಸಮಸ್ಯೆಯಾಗದಂತೆ ಪಾದಯಾತ್ರೆ ಹೋಗುವ ಮಾರ್ಗದಲ್ಲಿ ತಂಗಲು ಮತ್ತು ಊಟ ತಿಂಡಿ ತಯಾರಿಸಲು ಎಲ್ಲಾ ರೀತಿಯ ಪೂರ್ವ ಭಾವಿ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದರು.
ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಂಡೆ ರಾಮಯ್ಯ, ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಸಿದ್ದಪ್ಪಗುಜ್ಜರಿ, ಪದಾಧಿಕಾರಿಗಳಾದ ಎ.ಎಸ್.ರೇಣುಕಯ್ಯ, ಡಿ.ಆರ್.ಕೀರ್ತಿರಾಜ್, ಎಲ್.ವಿ.ಸಾವಂತ್, ಪಿ.ಎಸ್.ಸುರೇಶ್ ಬಾಬು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







