ಚಿತ್ರದುರ್ಗ;
ಭಾರತದ ಬಲಿಷ್ಟ ರಾಷ್ಟ್ರ ನವ ನಿರ್ಮಾಣಕ್ಕೆ ದೇಶಾಭಿಮಾನ, ಸಹಭಾಳ್ವೆ , ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆ ಅಗತ್ಯವಾಗಿ ಬೇಕಾಗಿದೆ ಎಂದು ಎಸ್.ಜೆ ಎಂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೆ.ಸಿ ರಮೇಶ್ರವರು ತಿಳಿಸಿದರು
ಚಂದ್ರವಳ್ಳಿಯ ಎಸ್.ಜೆ ಎಂ ಮಹಾವಿದ್ಯಾಲಯದಲ್ಲಿ ಶನಿವಾರ ಜಯದೇವ ಸಭಾಂಗಣದಲ್ಲಿ ಎನ್.ಸಿ.ಸಿ. ಬ್ಯಾಟಲಿಯನ್ ವತಿಯಿಂದ ಎನ್.ಸಿ.ಸಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎನ್.ಸಿ.ಸಿ ವಿದ್ಯಾರ್ಥಿಗಳು ಭಾರತೀಯ ಯೋಧರಿದ್ದಂತೆ ಜಮ್ಮುಕಾಶ್ಮಿರದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಘಟನೆ ಅಮಾನವೀಯವಾಗಿದೆ. ಇದನ್ನು ಪ್ರತಿಯೋಬ್ಬರು ಖಂಡಿಸಬೇಕಾಗಿದೆ ಯೋಧರಿಗೆ ಬೆಂಬಲಿಸುವ ಮೂಲಕ ದೇಶಭಕ್ತಿ ಮೆರೆಯಬೇಕಾಗಿದೆ.
ಎನ್.ಸಿ.ಸಿ ಯಿಂದ ವಿದ್ಯಾರ್ಥಿಗಳಿಗೆ ಗೌರವ ಹಾಗೂ ಉದ್ಯೋಗದಲ್ಲಿ ಹಾಗೂ ಸೇನೆಯಲ್ಲಿ ಸೇರುವುದಕ್ಕೆ ಉಪಯೋಗವಾಗಲಿದೆ ಪಠ್ಯದ ಜೊತೆಗೆ ಉತ್ತಮ ಅರೋಗ್ಯ ಶಿಸ್ತು,.ಶ್ರದ್ದೆ ಹಾಗು ದೈಹಿಕ ಮತ್ತು ಮಾನಸಿಕ ಮತ್ತು ನಾಯಕತ್ವ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಭಾರತೀಯ ಯೋಧರ ಅದರ್ಶ ತತ್ವಗಳನ್ನುವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಇದೇ ಸಂದರ್ಭದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ನಿವೃತ್ತ ಎನ್.ಸಿ.ಸಿ ಅಧಿಕಾರಿಗಳು ಹಾಗು ಕ್ಯಾಪ್ಟನ್ ಎಸ್.ಜಿ ಗೋಪಾಲಪ್ಪರವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಎಸ್ ಜೆ ಎಂ ಕಾಲೇಜಿನ ಎನ್.ಎಸ್ ಎಸ್ ಅಧಿಕಾರಿ ಅರ್.ಕೆ..ಕೇದರನಾಥ್ ಮಾತನಾಡಿ ಎನ್.ಸಿ.ಸಿ. ಯಿಂದ ಅಗುವ ಉಪಯೋಗಗಳ ಬಗ್ಗೆ ತಿಳಿಸಿದರು.
ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಡಾ. ಕೆ.ಸಿ ರಮೇಶ್ ಹಾಗೂ ಗೋಪಾಲಪ್ಪನವರು ಬಹುಮಾನ ವಿತರಣೆ ಮಾಡಿದರು ಎನ್.ಸಿ.ಸಿ ವಿದ್ಯಾರ್ಥಿನಿ ಲಿಖಿತ ಸ್ವಾಗತಿಸಿದರು ಮೋಹನ್ ವಂದಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು ಇದಕ್ಕೂ ಮುನ್ನ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ಎನ್.ಸಿ.ಸಿ ವಿದ್ಯಾರ್ಥಿಗಳು ಶ್ರದ್ದಾಂಜಲಿ ಸಮರ್ಪಿಸಿದರು.