ಬೆಂಗಳೂರು
ಕಳೆದ ವಾರ ವಿಜಯನಗರದಿಂದ ಅಪಹರಣಗೊಂಡಿದ್ದ ಖಾಸಗಿ ಶಾಲಾ ಮಾಲೀಕ ಹಾಗೂ ಮುಖ್ಯೋಪಧ್ಯಾಯ ರವಿ ವೀರಭದ್ರಯ್ಯ ಅವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿರುವ ವಿಜಯನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ವಿಜಯನಗರದ ಆರ್ಟಿಐ ಕಾರ್ಯಕರ್ತ ರವಿಯ ಹಾಗೂ ಡ್ಯಾನಿಯಲ್ ಬಂಧಿತ ಆರೋಪಿಗಳಾಗಿದ್ದಾರೆ ಕಳೆದ ಫೆ. 19 ರಂದು ಅಪಹರಣವಾಗಿದ್ದ ವೀರಭದ್ರಯ್ಯ ಅವರನ್ನು ಪೋಲಿಸರು ಪತ್ತೆಹಚ್ಚಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯನಗರದ ನ್ಯೂ ಪಬ್ಲಿಕ್ ಸ್ಕೂಲ್ನಿಂದ ಅಪಹರಣಕ್ಕೊಳಗಾಗಿದ್ದರು. ಓಮ್ನಿ ಕಾರಿನಲ್ಲಿ ಬಂದ ಅಪರಿಚಿತರು ಉದ್ಯಮಿ ವೀರಭದ್ರಯ್ಯ ಅವರನ್ನು ಅಪಹರಣಗೈದಿದ್ದರು. ಈ ಸಂಬಂಧ ಸಿಸಿಟಿವಿಯಲ್ಲಿ ಆರೋಪಿಗಳ ಗುರುತು ಪತ್ತೆಯಾಗಿತ್ತು.
ಆರೋಪಿಗಳು ಆರ್ಟಿಐ ಮುಖಾಂತರ ಖಾಸಿಗಿ ಶಾಲೆಯ ಮಾಲೀಕ ವೀರಭದ್ರಯ್ಯನಿಗೆ ಈ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ರವಿ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಇದೇ ದ್ವೇಷಕ್ಕೆ ರವಿ ವೀರಭದ್ರಯ್ಯನನ್ನ ಅಪಹರಣ ಮಾಡಿಸಿದ್ದ ಎಂದು ತಿಳಿದು ಬಂದಿದೆ.
ಆರೋಪಿ ರವಿ, ಡ್ಯಾನಿಯಲ್ ಎಂಬ ರೌಡಿಗೆ ಸುಪಾರಿ ಕೊಟ್ಟು ಅಪಹರಣ ಮಾಡಿಸಿರುವುದು ಪತ್ತೆಯಾಗಿದೆ ಅಪಹರಣ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ವಿಜಯನಗರ ಪೊಲೀಸರು. ತಮಿಳುನಾಡಿನಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








