ಬೆಂಗಳೂರು:
ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್ ಶೋ ನಡೆಯುತ್ತಿದ್ದು, ಬಾನಂಗಳದಲ್ಲಿ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ, ಚಮತ್ಕಾರಗಳು ಕಣ್ಮನ ಸೆಳೆಯುವಂತಿದೆ. ಈ ವೇಳೆ HLFT-42 ಯುದ್ಧ ವಿಮಾನದ ಮೇಲೆ ಬಜರಂಗಬಲಿ ಫೋಟೊ ವಿವಾದಕ್ಕೆ ನಾಂದಿಹಾಡಿತ್ತು.
HLFT-42 ಯುದ್ಧ ವಿಮಾನದ ಮೇಲೆ ಹನುಮನ ಫೋಟೋ ಹಾಕುವ ಮೂಲಕ ಮಾರುತ್ ಹೆಸರಿನ HLFT-42 ಯುದ್ಧ ವಿಮಾನವನ್ನು ಒಂದು ಧರ್ಮಕ್ಕೆ ಸೀಮಿತ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಎದ್ದ ವಿವಾದವನ್ನು ಫೋಟೋ ತೆಗೆದು ಹಾಕುವ ಮೂಲಕ ಶಮನ ಮಾಡುವ ಯತ್ನವನ್ನು ಹೆಚ್ ಎ ಎಲ್ ಮಾಡಿದೆ .
ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆಚ್.ಎ.ಎಲ್ ಎಂಡಿ, ಚೇರ್ಮನ್ ಅನಂತ ಕೃಷ್ಣನ್, ಹನುಮಾನ್ ಶಕ್ತಿಯ ಸಂಕೇತವೆಂದು ನಾವು HLFT-42 ಯುದ್ಧ ವಿಮಾನದ ಮೇಲೆ ಫೋಟೋ ಹಾಕಿದ್ದೆವು. ಹನುಮಾನ್ ಅಷ್ಟೇ ಶಕ್ತಿಯುತವಾದ ವಿಮಾನ ಎಂದು ಬಿಂಬಿಸುವ ನಿಟ್ಟಿನಲ್ಲಿ ಹಾಕಲಾಗಿತ್ತು. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ಫೋಟೋ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ