ಸೇವಾಲಾಲ್ ರ 280ನೇ ಜಯತೋತ್ಸವ

ಹೊಳಲ್ಕೆರೆ:

        ಬಣಜಾರ ಸಮಾಜ ಬಿಸಿಲಿಗೆ ಬೆನ್ನನ್ನು ಕೊಟ್ಟು ತನ್ನ ರಕ್ತವನ್ನು ಸುಟ್ಟುಕೊಂಡು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡ ಸಮಾಜ ಅಂದರೆ ಬಣಜಾರ ಸಮಾಜ ಎಂದು ಕಡುಚಿ ಕ್ಷೇತ್ರದ ಶಾಸಕ ಪಿ.ರಾಚೀವ್ ಕರೆ ನೀಡಿದರು.ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್‍ರ 280ನೇ ಜಯಂತೋತ್ಸವ ಹಾಗೂ ಜಿಲ್ಲಾ ಮಟ್ಟದ ತೀಜ್ ಸಾಂಸ್ಕತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಣಜಾರ ಸಮಾಜ ಜಾಗೃತರಾಗಬೇಕು. ಶೋಷಿತ ಅನ್ನುವ ಪದದ ನೋವನ್ನು ಇಲ್ಲಿಗೆ ಮುಕ್ತಾಯವಾಗಬೇಕು. ಮುಂದಿನ ಪೀಳಿಗೆಗೆ ಮುಂದುವರಿಯಬಾರದು ಎಂದರು.

        ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತವರ್ಗದವರಿಗೆ ತಿದ್ದುಪಡಿ ತಂದರು ಇಲ್ಲಿಯವರೆಗೆ ಜಾರಿಯಾಗಿಲ್ಲ. ಅಚಿದರೆ ಶೋಷಿತ ವರ್ಗದವರಿಗೆ ಅನ್ಯಾಯವಾಗಿದೆ ಎಚಿದರು.ಸಚಿತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ ಎಚಿದರು.

     ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ವಿದ್ಯೆಯಿಂದ ವಂಚನೆ ಮಾಡದೇ ಅವರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿಸಿಕೊಳ್ಳಬೇಕು. ಸರಕಾರ ನಾನಾ ಸೌಲಭ್ಯ ಸವಲತ್ತು ಪಡೆದು ಸದ್ಬಳಕೆ ಮಾಡಿಕೊಳ್ಳುವಂತೆ. ಎಲ್ಲರು ಒಗ್ಗಟ್ಟಾಗಿ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗ ಒಗ್ಗಟ್ಟು ಹೋರಾಟ ಮಾಡಬೇಕು ಎಂದು ತಿಳಿಸಿದರು.

         ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ ಕಳೆದ ವರ್ಷದಿಂದ ಸರಕಾರ ವತಿಯಿಂದ ಸೇವಾಲಾಲ್ ಜಯಂತಿ ಆಚರಿಸಲಾಗುತ್ತಿದೆ. ಕಲಿಯಬೇಕು ಕಲಿತದ್ದನ್ನು ಇತರರಿಗೂ ಕಲಿಸಿ ಎಲ್ಲರನ್ನು ಪಗ್ಗೂಡಿಸಿ ಮುನ್ನಡೆಸಿ ಉದ್ದರಿಸಬೇಕು ಎಂಬ ಸಚಿತ ಶ್ರೀ ಸೇವಾಲಾಲ್ ಅವರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸಂತ ಸೇವಾಲಾಲರು ಹುಟ್ಟಿದ ಸೂರಗೊಂಡನಕೊಪ್ಪ 30 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಹೊಂದಿ ಸುಕ್ಷೇತ್ರವಾಗಿದೆ.

         ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಚಿದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಎಂ.ಚಂದ್ರಪ್ಪ, ಸಂಸದ ಬಿ.ಎನ್.ಚಂದ್ರಪ್ಪ, ಬಿ.ಹೀರಾನಾಯ್ಕ್, ರಾಜಾನಾಯ್ಕ್ ಮಾತನಾಡಿದರು.ಬಣಜಾರ ಸಮುದಾಯದ ಅಧ್ಯಕ್ಷ ಜಯಸಿಂಹ ಕಾಟ್ರೋತ್ ಮುಖಂಡರುಗಳಾದ ದೇವೇಂದ್ರನಾಯ್ಕ್ ತಹಶೀಲ್ದಾರ್ ಕೆ.ನಾಗರಾಜ್, ಸ್ಮಜಾತ ಧನಂಜಯ್ ನಾಯ್ಕ್, ಸವಿತಾ ಕಾಟ್ರೋತ್, ಅಶೋಕ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link