ಚಿತ್ರದುರ್ಗ:
ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ರಾಂಪುರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾಗಿರು ರುದ್ರೇಶ್, ರಾಂಪುರದ ಬಳಿ 4 ಎಕರೆ 20 ಗುಂಟೆ ಜಮೀನು ಗುತ್ತಿಗೆ ಪಡೆದು ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳ ನಡುವೆ ಗಾಂಜಾ ಬೆಳೆದಿದ್ದನು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ರಾಂಪುರ ಠಾಣೆ ಪಿಎಸ್‌ಐ ಗುಡ್ಡಪ್ಪ ನೇತೃತ್ವದ ತಂಡ, ಗಾಂಜಾ ಬೆಳೆದಿದ್ದ ರುದ್ರೇಶ್ (45), ಮಂಜುನಾಥ್(45), ಜಂಬುನಾಥ್ (50), ಬಿ.ವೈ.ಮಂಜುನಾಥ್ (48) ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಐವರ ವಿರುದ್ಧ NDPS ಆಯಕ್ಟ್ ಕಲಂ 8 ಹಾಗಾ 20(a)(b) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ 9871.73 ಕೆ.ಜಿ ತೂಕದ 8250 ಗಾಂಜಾ ಗಿಡಗಳು 4 ಕೋಟಿ ಬೆಲೆ ಬಾಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ