ಲಿಂಗಾಯತರಿಗೆ ಟಿಕೆಟ್ ನೀಡಲು ಆಗ್ರಹ..!!

ಹಾವೇರಿ :

        ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಆರುವರೆ ಲಕ್ಷ ಮತದಾನವಿರುವ ಲಿಂಗಾಯತರಿಗೆ ಕಾಂಗ್ರೇಸ್ ಪಕ್ಷ ಟಿಕೇಟ್ ನೀಡಬೇಕು ಎಂದು ಮಾ,05 ರಂದು ಹೈಕಮಾಂಡಗೆ ನಿಯೋಗ ಹೋಗಲಾಗುವುದು ಶಾಸಕ ಬಿಸಿ ಪಾಟೀಲ ಹೇಳಿದರು. ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

        ಲಿಂಗಾಯತರು ಬಿಜೆಪಿ ಪರ ಇದ್ದಾರೆ ಎಂಬ ಆಪಾಧನೆ ಕಳಂಕ ಇದೆ. ಆದರೆ ಅವರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ ಎಂದು ತೊರಿಸಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಿ ಎಂದು ವೀರಶೈವ ಲಿಂಗಾಯತ ಮುಖಂಡರು ಒಟ್ಟಾಗಿ ಸೇರಿಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ನಮ್ಮಲ್ಲಿ ಅರ್ಹತೆ, ಸಾಮಥ್ಯ ನೋಡಿ 5-6 ಮುಖಂಡರ ಪಟ್ಟಿಯನ್ನು ಶೀಘ್ರವೇ ತಯಾರು ಮಾಡಲಾಗುತ್ತದೆ.

         ಈ ಕ್ಷೇತ್ರದಿಂದ ಬಹು ದಿನಗಳಿಂದ ಲಿಂಗಾಯತರಿಗೆ ಟಿಕೇಟ್ ಸಿಕ್ಕಿಲ್ಲಾ ಇದು ದುರಂತವಾಗಿದೆ. ಲಿಂಗಾಯತರು ಕಾಂಗ್ರೇಸ್ ಪಕ್ಷದಲ್ಲಿಯೇ ಹೆಚ್ಚು ಇದ್ದಾರೆ. ಆದರೆ ಅವರಿಗೆ ಅವಕಾಶ ನೀಡಬೇಕಾಗಿದೆ. ಪಕ್ಷಕ್ಕೆ ದುಡಿಯಲು ಸಿದ್ಧರಿದ್ದೇವೆ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಬಿಸಿಪಿ ಹೇಳಿದರು.

          ಮುಖಂಡ ಜಿಎಸ್ ಪಾಟೀಲ ಮಾತನಾಡಿ ಸಮಾಜವನ್ನು ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡುತ್ತಿದ್ದೇವೆ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರಿಗೆ ಟಿಕೇಟ್ ನೀಡುವಂತೆ ಒತ್ತಾಯ ಮಾಡುತ್ತೇವೆ.ಇದನ್ನು ಕೇಳುವುದು ನಮ್ಮ ಹಕ್ಕು. ನಂತರ ಪಕ್ಷದ ಗುರುತಿಸಿದ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಲಾಗುವುದು ಎಂದರು. ಮುಖಂಡರಾದ ಎಂಎಂ ಹಿರೇಮಠ. ಸಂಜೀವಕುಮಾರ ನೀರಲಗಿ.ಟಾಕನಗೌಡ ಪಾಟೀಲ, ಪ್ರಭುಗೌಡ ಬಿಷ್ಟನಗೌಡ್ರ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link