ಶಿಗ್ಗಾವಿ :
ಕ್ಷೇತ್ರದಲ್ಲಿ ಬೊಮ್ಮಾಯಿಯವರಿಂದ ಡಿ ಎಸ್ ಮಾಳಗಿಯವರು ಅಹಿಂದಾ ಹೆಸರಲ್ಲಿ ದೊಡ್ಡ ಪ್ರಮಾಣ ಹಣಕಾಸು ಪಡೆದುಕೊಂಡಿದ್ದಾರೆ ಎಂದು ಕೆಲವರು ಹುಳಿ ಹಿಂಡುವ ಕೆಲಸದಲ್ಲಿ ನಿರತರಾಗಿದ್ದಾರೆ ಮುಂದಿನ ದಿನಗಳಲ್ಲಿ ಬೊಮ್ಮಾಯಿಯವರು ಅಂತಹ ವ್ಯಕ್ತಿಗಳನ್ನು ದೂರ ಇಡದೆ ಇದ್ದರೆ ಬೊಮ್ಮಾಯಿಯವರಿಗೆ ರಾಜಕೀಯ ಹಿನ್ನಡೆಯಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಜೊತೆಗೆ ರಾಜಕೀಯವಾಗಿ ನಮಗೆ ತುಂಬಾ ಅನ್ಯಾಯವಾಗಿದೆ, ಎಂದು ರಾಜ್ಯ ದಲಿತ ಮುಖಂಡರು ಹಾಗೂ ಅಹಿಂದ ನಾಯಕರು ಆಗಿರುವ ಡಿ ಎಸ್ ಮಾಳಗಿ ಶಾಸಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿರುವ ಅವರು 10 ಸಾವಿರ ಕರಪತ್ರ ಮಾಡಿ ಪ್ರತಿ ಗ್ರಾಮಕ್ಕೂ ಹಂಚುವ ಮೂಲಕ ನಾನೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ವ್ಯಕ್ತಿ ಎಂದು ಬಸವಾದಿ ಶರಣರ ಆಣೆ ಮಾಡುವ ಮೂಲಕ ಬೊಮ್ಮಾಯಿಯವರಿಂದ ಯಾವುದೇ ಅಂಹಿದಾ ಹೆಸರಲ್ಲಿ ನೆರವು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೊಮ್ಮಾಯಿವರನ್ನು ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಕರೆತರಲು ಹಲವಾರು ವಿವಿದ ಸಮಾಜದ ಮುಖಂಡರು ಸೇರಿ ಒಂದು ದೊಡ್ಡ ಗುಂಪು ಕಟ್ಟಿಕೊಂಡು ಶ್ರಮಿಸಿದ್ದೆವೆ, ಅದೇ ರೀತಿ 2008 ರ ಚುನಾವಣೆಯಲ್ಲಿ ಬೊಮ್ಮಾಯಿಯವರು ಆಯ್ಕೆಯಾದ ನಂತರ ಶಿಗ್ಗಾವಿ ಸವಣೂರ ಕ್ಷೇತ್ರವು ಶೇ. 75 ಎಷ್ಟು ಅಭಿವೃದ್ದಿಯಾಗಿದೆ, ಬೊಮ್ಮಾಯಿಯವರು ಸಚಿವರಾದ ನಂತರ ಕ್ಷೇತ್ರದಲ್ಲಿ ಈಗ ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಟರಾದವರನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ ಅದಕ್ಕೆ ಕಾರಣ ಬೊಮ್ಮಾಯಿಯವರು, ಆ ಬೊಮ್ಮಾಯಿಯವರನ್ನು ಕ್ಷೇತ್ರಕ್ಕೆ ತರದೇ ಹೊಗಿದ್ದರೆ ಈಗ ಬಲೀಷ್ಟರೆನಿಸಿಕೊಂಡಿರುವವರು ಅಭಿವೃದ್ದಿಯಾಗುತ್ತಿದ್ದರೆ ? ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.
ಕ್ಷೇತ್ರಕ್ಕೆ ಕರೆತರುವ ಸಂದರ್ಭದಲ್ಲಿ ವರ್ಷಗಟ್ಟಲೆ ಸಂಘಟನೆಯ ಮೂಲಕ ಧರ್ಮಗುರುಗಳ, ಸಭೆ ಸಮಾರಂಭಗಳನ್ನು ಮಾಡಿದ್ದೇವೆ ಅದಕ್ಕೆ ಯಾವುದೇ ಆರ್ಥಿಕ ಸಹಾಯವನ್ನು ಪಡೆಯದೇ ಲಕ್ಷೋಪಲಕ್ಷ ಹಣವನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದೆವೆ ಎಂದರು.
ಕ್ಷೇತ್ರದಲ್ಲಿ ಮೊದಲು ಶಾಸಕರಾಗಿದ್ದ ಮಂಜುನಾಥ ಕುನ್ನುರ, ಸೈಯದ್ ಅಜ್ಜಂಪೀರ ಖಾದ್ರಿ, ರಾಜಶೇಖರ ಸಿಂಧೂರ ಇವರುಗಳು ಶಾಸಕರಿರುವ ಸಂದರ್ಭದಲ್ಲಿಯೂ ಸಹಿತ ರಾಜಕೀಯವಾಗಿ ಕೈಲಾದ ಸಹಾಯ ಮಾಡಿದ್ದೆನೆ, ಇವರಿಂದಲೂ ಸಹಿತ ಯಾವುದೆ ಪ್ರತಿಲಾಪೆಕ್ಷೆ ಪಡೆದಿಲ್ಲ, ಅದೇ ರೀತಿ ಬೊಮ್ಮಾಯಿಯವರ ಆರ್ಥಿಕ ಹಾಗೂ ರಾಜಕೀಯ ಋಣದಲ್ಲಿ ನಾನಿಲ್ಲ ಎಂದಿರುವ ಅವರು ನಾನು ಜೀಪು, ಕಾರು ಖರೀದಿ, ಒಳ್ಳೆಯ ಬಟ್ಟೆ ಹಾಕುವದರಿಂದ ಹತಾಶರಾದ ಬೊಮ್ಮಾಯಿ ಬೆಂಬಲಿಗರು ಬೊಮ್ಮಾಯಿಯವರ ಹಣದಿಂದ ಇವೆಲ್ಲವನ್ನೂ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಮುಗ್ದರ ಮನದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ, ಹೀಗಿರುವ ಸಮಯದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಟಿಪ್ಪಣಿ ಮಾಡುತ್ತಿರುವವರು ಇದನ್ನು ನಿಲ್ಲಿಸಬೇಕು ಇಷ್ಟೇಲ್ಲಾ ಇದ್ದರೂ ಆಧುನಿಕ ಬಸವಣ್ಣ, ನ್ಯಾಯದ ಹರಿಕಾರ, ದುರ್ಬಲ ವರ್ಗಗಳ ಹಿತ ಚಿಂತಕ ಎಂದು ನಾನೆ ನನ್ನ ಬಾಯಿಯಿಂದ ಬೊಮ್ಮಾಯಿಯವರನ್ನು ಕರೆದೆ ಆದರೆ ಬೊಮ್ಮಾಯಿಯವರ ಹೃದಯ ಕರಗಲೇಯಿಲ್ಲ.
ವಯಕ್ತಿಕವಾಗಿ ನಾನು ಬೊಮ್ಮಾಯಿಯವರಾದಿಯಾಗಿ ಯಾರಿಂದಲೂ ಹಣ ಪಡೆದಿಲ್ಲ, ವರ್ಗಾವಣೆ ದಂದೆಯಲ್ಲಿ ಭಾಗಿಯಾಗಿಲ್ಲ, ಅಧಿಕಾರಿಗಳಿಂದ, ಗುತ್ತಿಗೆಧಾರರಿಂದ ಹಣಕಾಸಿನ ಭಿಕ್ಷೆ ಬೇಡಿಲ್ಲ, ಅದು ನನಗೆ ಅವಶ್ಯಕತೆಯೂ ಇಲ್ಲ, ವಿವಿದ ಸಹಾಯಕ್ಕೆ ಕೈ ಚಾಚದೆ ವಿವಿದ ಕಾಮಗಾರಿ, ಕೆರೆ ಹೂಳೆತ್ತುವದು, ರಸ್ತೆ, ಗಟಾರ, ಸಭಾಭವನ ಯಾವುದೇ ಕಾಮಗಾರಿಗಳನ್ನು ನನ್ನ ಸ್ವಂತಕ್ಕೆ ನೀಡಿಲ್ಲ ಇನ್ನೂ ಗೋಟಗೋಡಿಯಲ್ಲಿರುವ ಪ್ರೌಡ ಶಾಲೆಗೆ ಎಸ್ ಆರ್ ಬೊಮ್ಮಾಯಿಯವರ ಹೆಸರಿಡುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿಯಮಾವಳಿ ಪ್ರಕಾರ 3 ಲಕ್ಷ ದಾನಿಗಳು ಇಖಾಲೆ ನೀಡಲು ತಿಳಿಸಿದಾಗ 3 ಲಕ್ಷ ಹಣ ಪಡೆದಿರುತ್ತೆನೆ ಶಿಕ್ಷಣ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಿದ ತಕ್ಷಣ ಹಣವನ್ನು ವಾಪಾಸ ಕೊಡುತ್ತೆವೆ.
ಇನ್ನು ಹತ್ತು ಹದಿನೈದು ವರ್ಷಗಳಿಂದ ಇವರ ಜೊತೆಗಿದ್ದು ನಾಲ್ಕಾರು ಜನರನ್ನು ಕಟ್ಟಿಕೊಂಡು ಸಂಘಟನೆ ಮಾಡಿದ್ದು ಅದರ ಖರ್ಚು ಅಂದಾಜು 25 ರಿಂದ 30 ಲಕ್ಷ ಆಗಬಹುದು ಅದನ್ನು ನಾನು ಅಪೇಕ್ಷಿಸುವದಿಲ್ಲ 2018 ರ ಚುನಾವಣೆಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಟೀಕೆಟ್ ಕೊಡಿಸುತ್ತೆನೆ ಎಂದು ಹೇಳಿ ಕೊನೆಗೆ ಮಾತಿಗೆ ತಪ್ಪಿದರು, ನಂತರ ಹಾವೇರಿ ಜಿಲ್ಲಾ ಎಸ್ ಸಿ ದೌರ್ಜನ್ಯ ತಡೆ ಸಮಿತಿ ಸದಸ್ಯನಾಗಿ ಜಿಲ್ಲಾಧಿಕಾರಿಗಳು ಆಯ್ಕೆ ಮಾಡಿದ್ದರು ಈಗ ಸದಸ್ಯತ್ವ ರದ್ದು ಪಡಿಸಿ ಬೇರೆಯವರನ್ನು ಆಯ್ಕೆ ಮಾಡಿದ್ದಾರೆ ಒಟ್ಟಾರೆ ನಾನು ಹೇಳಿದವರಿಗೆ, ಬಡವರಿಗೆ, ನೊಂದವರಿಗೆ, ಗುಡಿಗುಂಡಾರಗಳಿಗೆ, ಮಠಮಾನ್ಯರಿಗೆ, ಆರ್ಥಿಕ ಸಹಾಯ ನೀಡಿದ್ದಾರೆ ಅದಕ್ಕೆ ನನಗೆ ಸಂತೋಷವಿದೆ, ಸ್ವಾಭಿಮಾನದಿಂದ ಬಸವತತ್ವದ ಪರಿಪಾಲಕನಾಗಿ ಕಾಯಕದೊಂದಿಗೆ ವಿಶ್ವಗುರು ಬಸವಣ್ಣನವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೆನೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಎಸ್ ಬಿ ಗಚ್ಚಿನಮಠ, ವಾಲ್ಮೀಕಿ ಸಮಾಜದ ಮುಖಂಡರಾದ ಗುರುನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಪಾಟೀಲ್, ನಾಗರಾಜ ಹಾವೇರಿ, ಮಾದೇವಪ್ಪ ವಡ್ಡರ, ಸಿದ್ದಪ್ಪ ಹರಿಜನ, ಕಾಳಪ್ಪ ಬಡಿಗೇರ, ವಾಯ್ ಬಿ ಹರಿಜನ, ಮಾಬುಸಾಬ್ ಕೋಳೂರ, ಸಂಗಯ್ಯ ಹಿರೇಮಠ, ಶೇಖ್ ಮುಲ್ಲಾ ಸೇರಿದಂತೆ ಇತರರು ಇದ್ದರು.