ಮಲೇಬೆನ್ನೂರು;
ಹರಿಹರ ತಾಲ್ಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆಯ ಜಾತ್ರ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತೇದೆಂದು ಟ್ರಸ್ಟ್ ನ ಕಾರ್ಯದರ್ಶಿ ಎಅ.ಸುರೇಶ್ ಮಾಹಿತಿ ನೀಡಿದರು.
ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆಯ ಮಹಾಶಿವರಾತ್ರಿಯ ಮಹೋತ್ಸವವು ಶಿವರಾತ್ರಿಯ ಅಮವಾಸ್ಯೆಯಿಂದ ಪಾಲ್ಗುಣ ಶುದ್ಧ ಸಪ್ತಮಿಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗುದು. ಬುಧವಾರ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರ ಶಿವಯೋಗಿಗಳ ಗದ್ದಿಗೆ ಮಹಾಪೂಜೆ ನಂತರ ನಂದಿ ಧ್ವಜಾರೋಹಣವನ್ನು ನಂದಿಗುಡಿಯ ಶ್ರೀಮದ್ ವೃಷಭಪುರಿ ಜಗದ್ಗುರು ಶ್ರೀ ಸಿದ್ದಾರಾಮೇಶ್ವೇರ ಶಿವಾಚಾರ್ಯ ಶ್ರೀಗಳು ತಮ್ಮ ಅಮೃತ ಹಸ್ತದಿಂದ ನೇರವೇರಿಸಿದರು.
ಗುರುವಾರ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಕರಿಬಸವೇಶ್ವರ ಶಿವಯೋಗಿಗಳ ಗದ್ದಿಗೆ ಮಹಾಪೂಜೆ ನಂತರ ನಂದಿ ನಂದಿಗುಡಿಯ ಶ್ರೀಮದ್ ವೃಷಭಪುರಿ ಜಗದ್ಗುರು ಶ್ರೀ ಸಿದ್ದಾರಾಮೇಶ್ವೇರ ಶಿವಾಚಾರ್ಯ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಬೆಳಗ್ಗೆ 8 ಗಂಟೆಗೆ ರಥೋತ್ಸವವನ್ನು ನೇರವೇರಿಸಿವರು.
ಶುಕ್ರವಾರ ಜವಳ,ಹರಕೆ,ಮತ್ತು ತುಲಾಭಾರ ನಡೆಯುವುದು. ಶನಿವಾರ ಕುಸ್ತಿ ಕ್ರೀಡೆ ನಡೆಯುವವು. ಭಾನುವಾರ ಕಾಣಿಕೆ ಒಪ್ಪಿಸುವುದು,ಸೋಮವಾರ ಪೂಜೆಯ ನಂತರ ಫಳಾರ ಲಾಗುವುದು ಮತ್ತು ಮಂಗಳವಾರ ಸ್ವಾಮಿಯ ಬೆಳ್ಳಿ ರಥ ಮತ್ತು ಪಾಲಿಕೋತ್ಸವ ಹಾಕಲಾಗುವುದು. ಈ ಬಾರಿ ರಥಕ್ಕೆ ಹೈಡ್ರಾಲಿಕ್ ಬ್ರೇಕ್ ವ್ಯೆವಸ್ಥೆ ಅಳವಡಿಸಲಾಗಿದೆ.ದೇವಾಸ್ಥಾನದಲ್ಲಿ 116 ಕ್ಯಾಮರ ಅಳವಡಿಸಲಾಗಿದೆ.ಸೂಕ್ತ ಭದ್ರೆಗಾಗಿ ಪೋಲಿಸ್ ವ್ಯವಸ್ಥೆ ಮಾಡಲಾಗಿದೆ .ದಾವಣಗೆರೆ ,ಚಿತ್ರದುರ್ಗ,ಹಾವೇರಿ,ಶಿವಮಾಗ್ಗ,ಬಳ್ಳಾರಿ ಇತರೆ ಕಡೆಯಿಂದ ಹೆಚ್ಚಿನ ಬಸ್ಸು ವ್ಯೆವಸ್ಥೆ ಮಾಡಲಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತ ವಸತಿ ಹಾಗೂ ಊಟೋಪಚಾರ, ಶುದ್ದೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ದಾವಣಗೆರೆ, ಹರಿಹರ, ಹೊನ್ನಾಳಿ, ಹಿರೇಕೆರೂರು, ತುಮ್ಮಿನಕಟ್ಟೆಯಿಂದ ಖಾಸಗಿ ಹಾಗೂ ರಾಜ್ಯ ಸಾರಿಗೆ ಬಸ್ ವ್ಯವಸ್ಥೆ ಇದೆ,