ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಅಗತ್ಯ ಕ್ರಮ ಕೈಗೊಳ್ಳಿ- ಮಂಜುಳಾ

ಜಗಳೂರು:

       ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಅಧಿಕಾರಿಗಳು ಮುಂಜಾಗೃತ ಕ್ರಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜುಳಾ ಶಿವಾನಂದಪ್ಪ ಸೂಚಿಸಿದರು.

        ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಬಿಳಿಚೋಡು ಆಸ್ಪತ್ರಗೆ ಬರುವ ಪಶು ವೈಧ್ಯರು ಮದ್ಯಪಾನ ಮಾಡಿಕೊಂಡು ಬರುತ್ತಾರೆ.ಅಂತಹವರನ್ನು ವರ್ಗಾವಣೆ ಮಾಡಿ ಇಲ್ಲವೇ ಬೇರೆಯವರನ್ನು ತಾತ್ಕಾಲಿಕವಾಗಿ ಹಾಕುವಂತೆ ಪಶು ಇಲಾಖೆಯ ವೈದ್ಯಾಧಿಕಾರಿ ರಂಗಪ್ಪರವರಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ದೋಣೆಹಳ್ಳಿ ಕ್ಷೇತ್ರದ ತಾ.ಪಂ.ಸದಸ್ಯರಾದ ಬಸವರಾಜು ಮಾತನಾಡಿ ಪಶು ಇಲಾಖೆಯ ಅಧಿಕಾರಿ ರಂಗಪ್ಪನವರು ಸರ್ಕಾರಿ ವಾಹನವನ್ನು ಬಳಸಿಕೊಂಡು ವಿವಿಧ ಪಕ್ಷಗಳ , ಖಾಸಗಿ ಸಭೆಗಳಿಗೆ ಹಾಜರಾಗುತ್ತಾರೆ.

          ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ರಾಜಕೀಯಕ್ಕೆ ಬರುವಂತೆ ತಿಳಿಸಿದರು. ಪಶುಭಾಗ್ಯ ಇಲಾಖೆಯಲ್ಲಿ ಒಂದೇ ಕುಟುಂಬಕ್ಕೆ ಪ್ರತಿ ವರ್ಷವೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಗೋಲ್‍ಮಾಲ್ ಮಾಡಿರುವ ನಿಮ್ಮ ವಿರುದ್ದ ಎಸಿಬಿಗೆ ದೂರು ನೀಡಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು. ಇದಕ್ಕೆ ದ್ವನಿಗೂಡಿಸಿ ಶಂಕ್ರನಾಯ್ಕ್ ಮಾತನಾಡಿ ಶಾಸಕರಿಗೆ ದಾರಿ ತಪ್ಪಿಸುವ ನೀವು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಹಣ ಪಡೆಯುತ್ತೀರಿ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

          ಜಿ.ಪಂ.ಸಹಾಯಕ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಸ್ವಾಮಿ ಸಭೆಯಲ್ಲಿ ವರಧಿ ಮಂಡಿಸಿ ಮಾತನಾಡಿ ನೀರಿನ ತೊಂದರೆ ಇರುವ ತಾಲ್ಲೂಕಿನ 28 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಖಾಸಗಿ ಬೋರ್‍ವೆಲ್‍ನಿಂದಲೂ ನೀರು ಪೂರೈಸಲಾಗುತ್ತದೆ. ಸವiಸ್ಯಾತ್ಮಕ ಹಳ್ಳಿಗಳನ್ನು ಗುರ್ತಿಸಲಾಗಿದೆ. ಏರ್ಪಿಲ್, ಮೇ ತಿಂಗಳಲ್ಲಿ ಇನ್ನೂ ಕುಡಿಯುವ ನೀರಿನ ಭಿಕರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು , ತಹಶೀಲ್ದಾರ್, ಇಓ,ನಾವು ಟೀಮ್ ವರ್ಕಾಗಿ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ನೀರಿನ ಸಮಸ್ಯೆ ಭಗೆಹರಿಸತ್ತೇವೆಂದು ಸಭೆಯಲ್ಲಿ ಮಾಹಿತಿ ನೀಡಿದರು.

         ಪಶು ಇಲಾಖೆ ಅಧಿಕಾರಿ ರಂಗಪ್ಪ ಮಾತನಾಡಿನಾಲ್ಕು ಕಡೆ ಗೋಶಾಲೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕ ನಂತರ ಮೇವು , ನೀರಿನ ವ್ಯವಸ್ಥೆ ಮಾಡಲಾಗುವೆಂದು ಅವರು ಸಭೆಯಲ್ಲಿ ಮಾಹಿತಿ ನೀಡಿದರು.ಸಮಾಜಕಲ್ಯಾಣ ಇಲಾಖೆ, ಬಿ.ಸಿ.ಎಂ., ಎಸ್ಟಿ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ಕೆಲವು ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ಬಿದ್ದಿಲ್ಲ. ಕಾರಣ ಬ್ಯಾಂಕನವರು ವಿದ್ಯಾರ್ಥಿಗಳ ಖಾತೆ ತೆರಯುವಲ್ಲಿ ನಿರ್ಲಕ್ಷವೇ ಕಾರಣ ಸೋಮವಾರ ಬ್ಯಾಂಕನವರ ಕರೇಯಿಸಿ ಸಭೆ ಮಾಡಿ ಇತ್ಯರ್ಥ ಮಾಡುವಂತೆ ಉಪಾಧ್ಯಕ್ಷರಾ ಬಸವರಾಜಪ್ಪ ಸೂಚಿಸಿದರು.

      ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಕೆಯ ಅನುಷ್ಠಾನಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವರಧಿ ಮಂಡಿಸಿದರು.

          ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಜಾನಕಿರಾಂ, ತಾ.ಪಂ.ಸದಸ್ಯರುಗಳಾದ ಶ್ರೀಮತಿ ಶಿಲ್ಪಾಮಂಜಣ್ಣ, ಲಕ್ಷ್ಮಿಬಾಯಿ ಸುರೇಶ್‍ನಾಯ್ಕ್, ಮಮತಾ, ಕಮಲಮ್ಮ, ಕುಬೇಂದ್ರ, ಬಸವರಾಜಪ್ಪ ಸೇರಿದಂತೆ ತಾಲ್ಲೂಕು ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link