ಹಾವೇರಿ :
ರಾಜ್ಯದ ಯಾಲಕ್ಕಿ ನಾಡು ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಹಣಾಹಣಿ ಪಕ್ಷಗಳ ಅಭ್ಯರ್ಥಿಗಳಿಗಾಗಿ ಕಸರತ್ತು ಜೋರಾಗಿದೆ. ರಾಷ್ಟೀಯ ಪಕ್ಷ ಕಾಂಗ್ರೇಸ್ ಸಂಭಾವ್ಯ ಅಭ್ಯರ್ಥಿಯನ್ನು ಕೆಪಿಸಿಸಿ ಬಿಡುಗಡೆ ಮಾಡಲಾಗಿದ್ದು, ಬಾರಿ ಕುತೂಹಲ ಉಂಟಾಗಿದೆ.
ಮಾಜಿ ಸಚಿವ ಬಸವರಾಜ ಶಿವಣ್ಣನವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್,ಗದಗ ಜಿಲ್ಲೆಯ ಡಿಆರ್ ಪಾಟೀಲ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿವೆ. ಈ ಹಂತ ಸಮಿಪೈನಲ್ ಅಂತಾಗಿದ್ದು, ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಉಳಿಸಿದೆ. ಕಳೆದೆರಡು ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಜಯ ಕೈತಪ್ಪಿದ್ದು, ಪಕ್ಷ ಈ ಬಾರಿ ಗೆಲ್ಲುವ ಶಪಥ ಮಾಡಲಾಗಿದೆ. ಟಿಕೇಟ್ ವಿಚಾರದಲ್ಲಿ ಚಾಣಾಕ್ಷತನ ಪಾಲಿಸಲಿದೆ ಎಂದು ಕಾಂಗ್ರೇಸ್ ಮೂಲಗಳು ತಿಳಿಸಿವೆ.