ನಟನ ಕೊಲೆಗೆ ಸಂಚು ರೂಪಿಸಿದ್ಧ ಆರೋಪಿಗಳ ಬಂಧನ..!!!

ಬೆಂಗಳೂರು

        ಹಣಕಾಸಿನ ವಿಚಾರವಾಗಿ ಉಂಟಾದ ದ್ವೇಷದಿಂದ ಸ್ಯಾಂಡಲ್‍ವುಡ್ ನಟನ ಕೊಲೆಗೆ ಸಂಚು ರೂಪಿಸಿದ್ದನ್ನು ಬಂಧಿತ ನಾಲ್ವರು ಆರೋಪಿಗಳು ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

       ಬಂಧಿತ ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ್, ವಿಜಯನಗರದ ಮಧುಸೂದನ್ ಹಾಗೂ ಪಿಜಿ ಹಳ್ಳಿಯ ಪೃಥ್ವಿರಾಜ್ ಸ್ಯಾಂಡಲ್‍ವುಡ್‍ನ ನಟನ ಕೊಲೆಗೆ ಸಂಚು ರೂಪಿಸಲು ಕಾರಣವನ್ನು ವಿಚಾರಣೆಯಲ್ಲಿ ಬಿಚ್ಚಿಟ್ಟಿದ್ದಾರೆ.

       ಇತ್ತೀಚೆಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಭರತ್ ಅಲಿಯಾಸ್ ಸ್ಲಂ ಭರತ್‍ಗೆ ಸ್ಯಾಂಡಲ್‍ವುಡ್‍ನ ನಟನ ತಾಯಿ ಹಣ ನೀಡಬೇಕಿತ್ತು. ಹಣ ನೀಡುವಂತೆ ಪದೇ ಪದೇ ಕೇಳುತ್ತಿದ್ದರು.ಇದಕ್ಕೆ ನಟನ ತಾಯಿ ನಿರಾಕರಿಸಿದ್ದರು ಇದೇ ವಿಚಾರವಾಗಿ ನಟನಿಗೆ ಕರೆ ಮಾಡಿ ಹಣ ನೀಡುವಂತೆ ಭರತ್ ಧಮ್ಕಿ ಹಾಕಿದ್ದಾನೆ.

       ಈ ವೇಳೆ ನಾನು ಯಾರ್ ಗೊತ್ತಾ ನಂಗೆ ಫೋನ್ ಮಾಡಿ ವಾರ್ನಿಂಗ್ ಕೊಡುತ್ತಿದ್ದೀರಾ ಎಂದು ಸ್ಟಾರ್ ನಟ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದು ಪೊಲೀಸರು ಪ್ರವೇಶದ ನಂತರ ಭರತ್ ಪರಾರಿಯಾಗಿ ನಟನ ವಿರುದ್ದ ಹಗೆ ಸಾಧಿಸುತ್ತಿದ್ದನು ಮಾಹಿತಿ ತಿಳಿದ ಪೊಲೀಸರು ಕಳೆದ ಫೆ. 5ರಂದು ಕೆಂಗೇರಿ ಬಳಿ ಭರತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

        ಪೊಲೀಸರ ನನ್ನ ಮೇಲೆ ಗುಂಡು ಹಾರಿಸಿ ಬಂಧಿಸಲು ನಟನಿಗೆ ನಾನು ಧಮ್ಕಿ ಹಾಕಿದ್ದೇ ಕಾರಣ ಅಂತ ತನ್ನ ಸಹಚರರ ಬಳಿ ಭರತ್ ಹೇಳಿಕೊಂಡು, ನಟನ ಹತ್ಯೆಗೆ ಸಂಚು ರೂಪಿಸಿದ್ದಾನೆ. ಬಳಿಕ ಸಹಚರರು ನಟನ ಮನೆ, ಚಿತ್ರೀಕರಣದ ಸ್ಥಳಗಳ ಮೇಲೆ ನಿಗಾ ಇಟ್ಟಿದ್ದರು. ಕಳೆದ ಗುರುವಾರ ನಟ ಶೇಷಾದ್ರಿಪುರಂ ರಸ್ತೆಯಲ್ಲಿ ಬರುವುದನ್ನು ತಿಳಿದಿದ್ದ ಭರತನ ಸಹಚರರು, ಕೊಲೆ ಮಾಡಲು ಕಾದು ಕುಳಿತಿರುವ ವೇಳೆ ಸಿಸಿಬಿ ಪೊಲೀಸರು ಧೀಡೀರ್ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

         ಬಂಧಿತ ಆರೋಪಿಗಳು, ತಾವು ಹತ್ಯೆ ಮಾಡಬೇಕು ಎಂದುಕೊಂಡಿದ್ದ ನಟನ ಚಲನವಲನಗಳ ಮೇಲೆ ಗಮನ ಇಟ್ಟಿದ್ದರು. ಸಮಯ ನೋಡಿಕೊಂಡು ದಾಳಿ ಮಾಡಲು ಹೊಂಚು ಹಾಕಿದ್ದ ಆರೋಪಿಗಳು, ಹತ್ಯೆ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿ ಕೊಂಡಿದ್ದಾರೆ ಆರೋಪಿಗಳ ಬಂಧನದಿಂದ ಸ್ಲಂ ಭರತ್ ಜೈಲಿನಲ್ಲಿದ್ದುಕೊಂಡೇ ಶಿಷ್ಯಂದಿರ ಮೂಲಕ ನಟನ ಹತ್ಯೆಗೆ ರೂಪಿಸಿದ್ದ ಸಂಚು ವಿಫಲವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link