ಬೆಂಗಳೂರು:
‘ದೇವರ’ ಸಿನಿಮಾ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ ಘಟನೆ ನಡೆದಿದೆ. ‘ದೇವರ’ ಸಿನಿಮಾ ತಂಡದ ಮೇಲೆ ಜೇನುಹುಳಗಳು ದಾಳಿ ಮಾಡಿದ್ದು ಇದರಿಂದ ಕೆಲವರು ಆಸ್ಪತ್ರೆ ಸೇರಿದ್ದಾರೆಂದು ವರದಿಯಾಗಿದೆ.
ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅಭಿನಯದ ‘ದೇವರ’ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇದರಲ್ಲಿ ಸೈಫ್ ಅಲಿ ಖಾನ್ ಅವರು ವಿಲನ್ ರೋಲ್ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು ಈ ಸಿನಿಮಾ ಶೂಟಿಂಗ್‌ನಲ್ಲಿ ತಂಡ ಬ್ಯೂಸಿ ಆಗಿದೆ.
ಆದರೆ ಸಿನಿಮಾ ಸೂಟಿಂಗ್ ವೇಳೆ ಜೇನುಹುಳುಗಳು ತಂಡದ ಮೇಲೆ ದಾಳಿ ಮಾಡಿರುವ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಇದರಿಂದ ಚಿತ್ರದ ಶೂಟಿಂಗ್ ಕೆಲ ಹೊತ್ತು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅಭಿನಯದ ಸಿನಿಮಾ ಶೂಟಿಂಗ್ ವೇಳೆ ಜೇನು ಹುಳುಗಳು ದಾಳಿ ಮಾಡಿವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ಜೇನು ಗೂಡಿನ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲನ್ನು ಎಸೆದಿದ್ದಾರೆ ಎಂದು ಚಿತ್ರ ತಂಡ ಅನುಮಾನಿಸಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆನ್ನಲಾಗುತ್ತಿದ್ದು ಯಾರಿಗೂ ಹೆಚ್ಚಿನ ತೊಂದರೆ ಆಗಿಲ್ಲ. ಹಾಗಾದರೆ ಸಿನಿಮಾ ಶೂಟಿಂಗ್ ವೇಳೆ ಯಾರೆಲ್ಲಾ ಇದ್ದರು ಎಂದು ಈಗ ತಿಳಿಯೋಣ.ಆಗಸ್ಟ್ 15ಕ್ಕೆ ಪುಷ್ಪ 2 ಚಿತ್ರ ಬಿಡುಗಡೆಯಾಗದೇ ಇದ್ದರೆ ಅದೇ ದಿನಾಂಕಕ್ಕೆ ಈ ಸಿನಿಮಾ ಬಿಡುಗಡೆಯಾಗ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಸಿನಿಮಾದ ಓವರ್ ಸೀಸ್ ಡೀಲ್ ಕ್ಲೋಸ್ ಆಗಿದೆ.
ದೇವರ ಸಿನಿಮಾದ ಓವರ್ ಸೀಸ್ ರೈಟ್ಸ್ 27 ಕೋಟಿಗೆ ಕ್ಲೋಸ್ ಆಗಿದ್ದು ದಿಲ್ ರಾಜು ಈ ಸಿನಿಮಾ ರೈಟ್ಸ್‌ಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ದಿಲ್ ರಾಜು ಡೀಲ್ ಕ್ಲೋಸ್ ಮಾಡಿದ್ದಾರೆ ಎಂಬ ಮಾತು ಬಹುತೇಕ ಕೇಳಿಬರುತ್ತಿದೆ.ಈ ಸಿನಿಮಾ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಆದರೆ ಈ ಚಿತ್ರಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಬಾಕಿ ಉಳಿದಿವೆ. ಸರಿಯಾದ ಔಟ್‌ಫುಟ್ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಎಪಿಯಲ್ಲಿ ಏಪ್ರಿಲ್ ತಿಂಗಳ ಚುನಾವಣೆಯ ಹಿನ್ನಲೆಯಲ್ಲಿ ಆ ವೇಳೆಗೆ ದೇವರನ್ನು ರಿಲೀಸ್ ಮಾಡಿದರೆ ದೊಡ್ಡ್ ಮಟ್ಟದಲ್ಲಿ ವರ್ಕೌಟ್ ಆಗುವ ಸಾಧ್ಯತೆ ಇಲ್ಲ ಎಂಬುದು ಚಿತ್ರತಂಡದ ಭಾವನೆ.
‘ದೇವರ’ ಸಿನಿಮಾ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ್ದು ಜಾನ್ವಿ ಕಪೂರ್ ಸೊಂಟಕ್ಕೆ ಕಚ್ಚಿವೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ್ದು ನಿಜವಾದರೂ ಜಾನ್ವಿ ಕಪೂರ್‌ಗೆ ಕಚ್ಚಿಲ್ಲ.
ತಂಡದ ಕೆಲ ಸದಸ್ಯರಿಗೆ ಮಾತ್ರ ಜೇನುಹುಳುಗಳು ಕಚ್ಚಿವೆ. ಈ ಸಮಯದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಇರಲೇ ಇಲ್ಲ. ಇದರಿಂದ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅದಾಗ್ಯೂ ಕೆಲವೆಡೆ ಜಾನ್ವಿ ಅವರಿಗೆ ಜೇನುಹುಳುಗಳು ಕಚ್ಚಿವೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ