ಮೈಸೂರು : ಮಗಳಿಗೆ ಮಕ್ಕಳಾಗಿಲ್ಲವೆಂದು ಕಳ್ಳನಾದ ತಂದೆ!!

ಮೈಸೂರು:

    ಮಗಳಿಗೆ ಮಕ್ಕಳಾಗಿಲ್ಲವೆಂದು ತಂದೆಯೊಬ್ಬ ಮಕ್ಕಳ ಕಳ್ಳನಾಗಿರುವ ವಿಚಿತ್ರ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

     ನಾಲ್ಕು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದಿದ್ದ ಮಗು ಅಪಹರಣ ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಇದೀಗ ಆರೋಪಿ ಗಂಗರಾಜು ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಆರೋಪಿ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

     ಹಲವು ವರ್ಷಗಳಿಂದ ನನ್ನ ಮಗಳಿಗೆ ಮಕ್ಕಳಿರಲಿಲ್ಲ. ಮಗುವೊಂದನ್ನು ತಂದು ಪೋಷಿಸಿದರೆ ತನ್ನ ಮಗಳಿಗೆ ಮಕ್ಕಳಾಗುತ್ತೆ ಎಂದು ಯಾರೋ ಹೇಳಿದ್ದ ಮಾತು ಕೇಳಿ ನಂಜನಗೂಡಿನ ಪಾರ್ವತಿ ಎಂಬ ಮಹಿಳೆಯ 3 ವರ್ಷದ ಮಗುವನ್ನು ಅಪಹರಿಸಿ ತನ್ನ ಮಗಳಿಗೆ ನೀಡಲು ಮುಂದಾಗಿದ್ದೆ ಎಂದು ತಿಳಿಸಿದ್ದಾನೆ. 

     ಇದೀಗ ಆರೋಪಿ ಗಂಗರಾಜು ರನ್ನು ಬಂಧಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link