ಟ್ರಾಕ್ಟರ್ ಸ್ಕೂಟರ್ ಡಿಕ್ಕಿ ಇಬ್ಬರು ಗಂಭೀರ

ಬೆಂಗಳೂರು

     ಟ್ರ್ಯಾಕ್ಟರ್ ಡಿಕ್ಕಿಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮಗು ಮೃತಪಟ್ಟರೆ, ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಎಂ ಲೇಔಟ್‍ನ ಎರಡನೇ ಹಂತದಲ್ಲಿ ನಡೆದಿ

      ಬಿಳೇಕಹಳ್ಳಿಯ ಸಹರಾ (3)ಎಂದು ಮೃತಪಟ್ಟ ಮಗುವನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಆಕೆಯ ತಂದೆ ಸತೀಶ್ ಮಾಂಡ್ರೆ, ತಾಯಿ ರಜಿನಿ ಮಾಂಡ್ರೆಯನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

      ಹೊಟೇಲ್ ಮ್ಯಾನೇಜ್‍ಮೆಂಟ್ ಕೆಲಸ ಮಾಡುತ್ತಿದ್ದ ಸತೀಶ್ ಮಾಂಡ್ರೆ, ಭಾನುವಾರ ಸಂಜೆ 6.20ರ ವೇಳೆ ಹೊಂಡಾ ಡಿಯೋ ಸ್ಕೂಟರ್‍ನಲ್ಲಿ ಪತ್ನಿ ರಜಿನಿ ಮಾಂಡ್ರೆ, ಪುತ್ರಿ ಸಹರಾಳನ್ನು ಕೂರಿಸಿಕೊಂಡು ಬಿಟಿಎಂ ಲೇಔಟ್‍ನ 2ನೇ ಹಂತದ 2ನೇ ಕ್ರಾಸ್‍ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.

       ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಸಹರಾ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರೆ, ತಂದೆ – ತಾಯಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಮೈಕೋ ಲೇಔಟ್ ಸಂಚಾರ ಪೊಲೀಸರು, ಟ್ರ್ಯಾಕ್ಟರ್ ಚಾಲಕ ಇಂದ್ರೇಶ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link