ಪಾವಗಡ
ಖಾಸಗಿ ದೂರವಾಣಿಯ ಕೇಬಲ್ ಹಾಕಲು ಆಳುದ್ದ ಚರಂಡಿ ತೆಗೆಯುವ ಮೂಲಕ ರಸ್ತೆ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಕಿರಿಕಿರಿ ಅಲ್ಲದೆ ಸಾವಿನ ಕೂಪಗಳಾಗಿ ತೊಂದರೆ ಉಂಟು ಮಾಡುತ್ತಿದ್ದಾರೆ.ಪಾವಗಡ ಶನಿ ದೇವಸ್ಥಾನದ ಬಳಿ ಆಳುದ್ದ ಚರಂಡಿ ತೆಗೆದು ಎಲ್ಲಾ ಮುಚ್ಚಿ, ವಾಹನಗಳು ಚಲಿಸುವ ಪ್ರಮುಖ ರಸ್ತೆ ಬಳಿ ತೆರೆದ ಗುಂಡಿಯನ್ನು ಹಾಗೆಯೆ ಬಿಟ್ಟಿರುವ್ಯದರಿಂದ, ದಿನವೊಂದಕ್ಕೆ ಹಲವಾರು ವಾಹನಗಳು ಗುಂಡಿಗೆ ಬಿದ್ದು ಮೂಳೆ ಮರಿದುಕೊಳ್ಳುತ್ತಿದ್ದಾರೆ.
ಗುತ್ತಿಗೆ ದಾರರಿಗೆ ಗುಂಡಿ ಮುಚ್ಚಿಸುವಂತೆ ಹೇಳಿದರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಾರ್ವಜನಿಕರು ನೊಂದು ನುಡಿಯುತ್ತಾರೆ. ರಸ್ತೆ ಸುರಕ್ಷತೆಯನ್ನು ನಿರ್ಲಕ್ಷಿಸಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿರುವ ಖಾಸಗಿ ದೂರವಾಣಿ ಕಂಪನಿಯವರ ವಿರುದ್ದ ಸೂಕ್ತ ಕ್ರಮ ಕೈಗೊಂಡು, ನೊಂದವರಿಗೆ ಸೂಕ್ತ ಪರಿ ಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
