ಗುಬ್ಬಿ:
ತಾಲ್ಲೂಕಿನಲ್ಲಿ ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ಹಾಗೂ ಆರಿವನ್ನು ಮೂಡಿಸುತ್ತಿದ್ದರೂ ಸಾರ್ವಜನಿಕರು ಕೊರೋನ ನಿಯಮಗಳನ್ನು ಸರಿಯಾಗಿ ಪಾಲಿಸದೆ ಮಾಸ್ಕನ್ನು ಧರಿಸಲು ಹಿಂಜರಿಯುತ್ತಿರುವುದು ಕಂಡು ಬರುತ್ತಿತ್ತು.
ತುಮಕೂರು ಉಪವಿಭಾಗಾಧಿಕಾರಿಗಳಾದ ಅಜಯ್ ರವರು ಪಟ್ಟಣಕ್ಕೆ ಆಗಮಿಸಿ ಅವರೆ ಖುದ್ದಾಗಿ ರಸ್ತೆಗಳಲ್ಲಿ ಸಂಚಾರ ಮಾಡುತ್ತ ಸಾರ್ವಜನಿಕರಿಗೆ ಕೊರೋನಾದ ಬಗ್ಗೆ ಅರಿವನ್ನು ಮೂಡಿಸುವ ಜೊತೆಗೆ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಿದರು. ನಂತರ ಮಾತನಾಡುತ್ತಾ ಕೊರೋನವನ್ನು ನಿಯಂತ್ರಿಸಿ ಹೋಗಲಾಡಿಸಲು ಎಲ್ಲ ಸಾರ್ವಜನಿಕರು ಸಹಕಾರ ನಿಡಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಆರೋಗ್ಯ ಮತ್ತು ಕಂದಾಯ ಹಾಗೂ ಪೆÇಲೀಸ್ ಇಲಾಖೆ ಗಳ ಜೊತೆ ಇತರ ಇಲಾಖೆ ಯವರು ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಓಡಾಡುವುದನ್ನು ನಿಲ್ಲಿಸಬೇಕು. ಜಾತ್ರೆ, ಸಂತೆ ಹಾಗೂ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಎಚ್ಚರಿಕೆಯಿಂದ ಇದ್ದು ಕರೋನಾವನ್ನು ಹೋಗಲಾಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಡ್- 2 ತಹಶೀಲ್ದಾರ್ ಶಶಿಕಲಾ, ಸಿಪಿಐ ರಾಮಕೃಷ್ಣಯ್ಯ, ಕಂದಾಯ ತನಿಖಾಧಿಕಾರಿಗಳು, ಪೆÇಲೀಸ್ ಸಿಬ್ಬಂದಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
