ಹಾವೇರಿ :
ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹುಲ್ಲತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಬಳಸಿಕೊಂಡಿರುವುದು ಕಂಡು ಬರುವುದು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿನೀಯ ಎಂದು ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಹೇಳಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತಾ ಕಾರ್ಯ ಮಾಡಿಸಿದ್ದು, ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದಾಂತಾಗಿದ್ದು, ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದಾಗ ಮಕ್ಕಳನ್ನು ಸ್ವಚ್ಚತಾ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದು ಕಲಿಕೆಯಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳನ್ನು ಬಳಸಿಕೊಳ್ಳುಲಾಗಿದೆ. ನೀವು ನೋಡಿಲ್ವಾ ದೇಶದ ಪ್ರಧಾನಿಗಳು ಸ್ವಚ್ಛ ಭಾರತ ಮಾಡುತ್ತಿರುವುದು. ಆ ನಿಟ್ಟಿನಲ್ಲಿ ನಾವು ಮಕ್ಕಳನ್ನು ಶೌಚಾಲಯ ಸ್ವಚ್ಚತೆಗೆ ಬಳಸಿದು ಎಂದು ಉದ್ದಟತನ ಉತ್ತರ ನೀಡಿದರು. ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಂಡಿದ್ದು ಬೇಸರದ ಸಂಗತಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹೊರತು ಶಾಲೆ ಕೆಲಸಗಳನ್ನು ಮಾಡಿಸಿಕೊಳ್ಳವುದು ಸರಿಯಲ್ಲ. ಕಲಿಕೆಯಲ್ಲಿ ಸ್ವಚ್ಚತಾ ಜಾಗೃತಿ ಪಾಠವನ್ನು ಹೇಳಿಕೊಡಬೇಕು ಪ್ರಾಕ್ಟಿಕಲ್ ಆಗಿ ಶೌಚಾಲಯ ಸ್ವಚ್ಚಗಳಿಸುವು ಮೂಲಕ ಜಾಗೃತ ಕಾರ್ಯಕ್ರಮಗಳು ಮಾಡುವುದು ಸರಿಯಲ್ಲ.
ಒಟ್ಟಾರೆ ಶಿಕ್ಷಣದಲ್ಲಿ ಸ್ವಚ್ಚತೆ ಜಾಗೃತಿ ಬಗ್ಗೆ ಶಿಕ್ಷಕರು ಬೋಧನೆ ಮಾಡಬೇಕು .ಮೊನ್ನೆ ತಾನೇ ಶಿಕಾರಿಪುರ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕರು ರೋಮ್ಯಾನ್ಸ ಪ್ರಕರಣ ಶಿಕ್ಷಣ ವ್ಯವಸ್ಥೆ ತಲೆದಗಿಸುವ ಕೆಲಸವಾಗಿದೆ. ಈ ರೀತಿಯ ಘಟನೆಗಳು ಮಕ್ಕಳ ಮೇಲೆ ಪರಿಣಾಮ ಬೀರಿತ್ತವೆ.
ಹುಲ್ಲತ್ತಿ ಶಾಲೆಯಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ಶೌಚಾಲಯ ಸ್ವಚ್ಛಗೊಳಿಸುವದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಮಕ್ಕಳನ್ನು ಶೌಚಗೃಹ ಸ್ವಚ್ಛತೆಗೆ ಬಳಸಿಕೊಳ್ಳಬಾರದು ಎಂದು ನಿಯಮವಿದ್ದರೂ ಶಿಕ್ಷಕರು ಮಕ್ಕಳಿಂದ ಶೌಚಾಲಯಗಳನ್ನು ತೊಳೆಸಿದ್ದಾರೆ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದಾರೆ.ಇದರ ಬಗ್ಗೆ ಶ್ರೀಧರ್.ಎನ್ ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಕೇಳಿದಾಗ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈ ರೀತಿಯ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬಸವರಾಜ ಭೋವಿ ಹೇಳಿದರು.