ರಾಯಚೂರು:
ಮೋದಿಯವರ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ, ಫ್ಯಾಸಿಸಂ ರೀತಿಯಲ್ಲಿ ಹಿಟ್ಲರ್ ಮಾದರಿಯಲ್ಲಿ ದೇಶವನ್ನ ಆಳಲು ಹೊರಟಿದ್ದಾರೆ. ಮೋದಿಯಂತಹವರಿಗೆ ಪಾಠ ಕಲಿಸಬೇಕಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಬಿ.ವಿ.ನಾಯಕ್, ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ, ಭಯ ಉಂಟುಮಾಡುವ ರೀತಿಯಲ್ಲಿ ಮೋದಿ ಇದ್ದಾರೆ. ಹೀಗಾಗಿ ಬಹಳಷ್ಟು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದರು. ನಿರಂತರ ಸಭೆಗಳನ್ನ ನಡೆಸಿರುವ ಬಿ.ವಿ.ನಾಯಕ್ ನಾಳೆ ಜಿಲ್ಲೆಯ ಪ್ರಮುಖ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಅಂತ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
