ಬೆಂಗಳೂರು :
ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸ್, ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
‘ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾವು ಉಸಿರಾಡಲು ಬಿಡಲ್ಲ. ಈ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಮುಕ್ತ ಮಾಡಿದ್ದೆ ಆದ್ರೆ, ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನ ಮಾಡಬೇಕಿದೆ’ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
‘ನಾವು ಬಡವರು ಕೆಲಸ ಆಗಿಲ್ಲ ಅಂತಾ ಹೇಳ್ತಿರಿಲ್ಲ ಅದಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಪಾಪದ ಫಲವಾಗಿ ನಾವು ಹಿಂದುಳಿದ ಪ್ರದೇಶ ಅಂತಾ ಹೇಳುವಂತಾಗಿದೆ. ಕಾಂಗ್ರೆಸ್ 70 ವರ್ಷದಲ್ಲಿ 6 ಕೋಟಿ ಸಿಲಿಂಡರ್ ಕೊಟ್ಟಿದೆ ಆದರೆ ಪ್ರಧಾನಿ ಮೋದಿ ಸರ್ಕಾರ 5 ವರ್ಷದಲ್ಲಿ 9 ವರೆ ಕೋಟಿ ಸಿಲಿಂಡರ್ ಕೊಟ್ಟಿದ್ದೇವೆ’ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ