ಭಾರತೀಯ ಕುಸ್ತಿ ಒಕ್ಕೂಟದ ಅಮಾನತು ರದ್ದುಪಡಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: 

   ಭಾರತೀಯ ಕುಸ್ತಿ ಒಕ್ಕೂಟದ  ಮೇಲಿನ ಅಮಾನತು ಆದೇಶವನ್ನು ಕ್ರೀಡಾ ಸಚಿವಾಲಯ  ರದ್ದುಗೊಳಿಸಿದೆ. ಡಿಸೆಂಬರ್ 2023 ರಲ್ಲಿ, ಸಚಿವಾಲಯವು ಆತುರದ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಿತ್ತು. ಇದೀಗ ಅಮಾನತು ಆದೇಶವನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ.

   ಮಾರ್ಚ್ 10 ರಂದು, ಕುಸ್ತಿ ಒಕ್ಕೂಟಕ್ಕೆ ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಗೆ ಮುಂದಿನ ಸೂಚನೆ ಬರುವವರೆಗೆ ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯಿಂದ ದೂರವಿರಲು ಸೂಚನೆ ನೀಡಿ ನಿರ್ದೇಶನ ನೀಡಿದೆ. ತಾತ್ಕಾಲಿಕ ಸಮಿತಿಗೆ ಭೂಪಿಂದರ್ ಸಿಂಗ್ ಬಜ್ವಾ ನೇತೃತ್ವ ವಹಿಸಿದ್ದರು, ಎಂಎಂ ಸೋಮಯಾ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದರು.

  ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಆಡಳಿತ ವೈಫಲ್ಯಗಳು ಮತ್ತು ಕಾರ್ಯವಿಧಾನದ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿತು. ಈ ಸಂಸ್ಥೆಯು ಸ್ಪಷ್ಟವಾಗಿ ಹಿಂದಿನ ಪದಾಧಿಕಾರಿಗಳ ನಿಯಂತ್ರಣದಲ್ಲಿದ್ದು, ಭಾರತದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011 (“ಕ್ರೀಡಾ ಸಂಹಿತೆ”) ಯನ್ನು ಉಲ್ಲಂಘಿಸಿದೆ. ಹಿಂದಿನ ಐಒಎ ನೇಮಿಸಿದ ತಾತ್ಕಾಲಿಕ ಸಮಿತಿಯು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ರದ್ದುಗೊಳಿಸಲಾಗಿದೆ. 

   ಕ್ರೀಡಾ ಸಂಹಿತೆಗೆ ಅನುಗುಣವಾಗಿ ಮತ್ತು ಕ್ರೀಡಾಪಟುಗಳನ್ನು ಕಿರುಕುಳ ಮತ್ತು ನಿಂದನೆಯಿಂದ ರಕ್ಷಿಸುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿಗಳಿಗೆ ಹಾಗೂ ಉತ್ತಮ ಆಡಳಿತದ ತತ್ವಗಳಿಗೆ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ, 2013 ಕ್ಕೆ ಅನುಗುಣವಾಗಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 2023 ರಲ್ಲಿ, ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಒಕ್ಕೂಟವನ್ನು ಕ್ರೀಡಾ ಸಚಿವಾಲಯ ರದ್ದುಗೊಳಿಸಿತ್ತು.