ನೆದರ್ಲ್ಯಾಂಡ್: 
ಶನಿವಾರ ನಡೆದ ಮಸೀದಿ ಮೇಲಿನ ದಾಳಿ ಮಾಸುವ ಮುಂಚೆಯೇ ಉಟ್ರೆಶ್ ನಗರದಲ್ಲಿ ಶೂಟಿಂಗ್ ನಡೆದಿದೆ ಈ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇಂದು ನಡೆದ ಈ ದಾಳಿಯ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಆರ್ಟಿವಿ ವಾಹಿನಿಗೆ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಸಿಟಿ ಟ್ರೈನ್ ನಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅವರು ವಾಹಿನಿಗೆ ತಿಳಿಸಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿರುವ 24 ಒಕ್ಟೊಬರ್ಪ್ಲೀನ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








