ಕಾಡುಗೊಲ್ಲರ ಸಂಘದಿಂದ 10000 ಆರ್ಥಿಕ ನೆರವು…!!

ಎಂ ಎನ್ ಕೋಟೆ :

        ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಕಾಳಿಂಗನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇತ್ತೀಚಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ನಾಲ್ಕು ಗುಡಿಸಲು ಭಸ್ಮವಾಗಿದು ಈ ಗ್ರಾಮಕ್ಕೆ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಚಂಗಾವರ ಕರಿಯಪ್ಪ , ಕಾಡುಗೊಲ್ಲರ ಸಂಘದ ತಾಲ್ಲೂಕ್ ಅಧ್ಯಕ್ಷ ದೇವರಾಜು ಹಾಗೂ ಕಾಡುಗೊಲ್ಲರ ಸಂಘದ ಮುಖಂಡರು ಭೇಟಿ ನೀಡಿ ಗುಡಿಸಲು ನಿವಾಸಿಗಳು ತಮ್ಮ ಮನೆಯಲ್ಲಿದ್ದ ದಾವಸ ಧಾನ್ಯಗಳನ್ನು ಕಳೆದುಕೊಂಡಿದ್ದು ಈ ಗಾಮದ ಗುಡಿಸಲು ನಿವಾಸಿಗಳಾದ ಕನಕದಾಸಪ್ಪ , ರೇಣುಕಪ್ಪ , ಶಂಕರಪ್ಪ , ಹಾಗೂ ಈರಣ್ಣ ಎಂಬುವರಿಗೆ ತಲ್ಲಾ ಹತ್ತುಸಾವಿರ ಆರ್ಥಿಕ ನೆರವನ್ನು ನೀಡಿದರು.ಜೂತೆಗೆ ಅವರ ಮನೆಯವರಿಗೆ ವಸತಿ ಸೌಲಭ್ಯಗಳನ್ನು ಸಂಘದ ವತಿಯಿಂದ ನೀಡಿದರು.

       ಕಾಡುಗೊಲ್ಲರ ಸಂಘದ ತಾಲ್ಲೂಕ್ ಅಧ್ಯಕ್ಷ ದೇವರಾಜು ಮಾತನಾಡಿ ಈ ಗ್ರಾಮದಲ್ಲಿ ಸುಮಾರು 30 ಮನೆಗಳು ಇದ್ದು ಇಲ್ಲಿ ಎಲ್ಲ ಗುಡಿಸಲು ಮನೆಯನ್ನು ಹೊಂದಿದ್ದು ಈ ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ಇಲ್ಲದಂತಾಗಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ ಈ ಗ್ರಾಮದವರಿಗೆ ವಸತಿ ಸೌಲಭ್ಯಗಳು ಇಲ್ಲ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಎಲ್ಲರಿಗೂ ವಸತಿ ಸೌಲಭ್ಯವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದರು.

         ಕಾರ್ಯಕ್ರಮದಲ್ಲಿ ಕಾಡುಗೊಲ್ಲರ ಸಂಘದ ತಾಲ್ಲೂಕ್ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲರಾದ ದೇವರಾಜು , ಬೆಂಗಳೂರು ಮಹನಗರ ಪಾಲಿಕೆ ಸದಸ್ಯ ರಾಜಣ್ಣ , ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು , ಡಿವೈಎಸ್ ಪಿ ಬಸವರಾಜು , ನೆಟ್ಟಿಕೆರೆ ಮಹಾಲಿಂಗಪ್ಪ , ಹನುಮಂತರಾಜು , ಅರ್ಚಕ ಯರ್ಪಪ್ಪ , ಹಾಗೂ ಮುಂಖಡರಾದ ರಾಮಣ್ಣ , ಶಂಕರಪ್ಪ , ಜಯಣ್ಣ , ಮಹಾಲಿಂಗಯ್ಯ ಭಾಗವಹಿಸಿದ್ದರು…

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link