ಹಾವೇರಿ :
ಜಿಲ್ಲೆಯ ಪರಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ಅವಶ್ಯವಿರುವಷ್ಟು ನೀರು ಹರಿಸುವಂತೆ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆ ಭೀಕರ ಬರಗಾಲ ಎದುರಿಸುತ್ತಿದೆ. ನದಿ, ಕೆರೆ, ಕಟ್ಟೆಗಳಲ್ಲಿ ನೀರು ಇಲ್ಲದೆ ನೀರಿನ ಹಾಹಾಕಾರ ಉಂಟಾಗಿದೆ. ಪ್ರಾಣಿ, ಪಕ್ಷಿಗಳು, ಜಾನುವಾರುಗಳು, ಜಿಲ್ಲೆಯ ಜನರು ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.
ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊಳೆವೆ ಭಾವಿಗಳು ಸಹ ನೀರಿಲ್ಲದೆ ಬತ್ತಿವೆ. ಹಾಗೂ ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದಿಯೋ ಅಂತಹ ಪ್ರದೇಶಗಳಲ್ಲಿ ಹೊಸ ಬೋರ್‍ವೆಲ್ ಕೊರಿಸಿ ಮೋಟರ್ ಅಳವಡಿಸಿ ನೀರನ್ನು ಒದಗಿಸಬೇಕು ಹಾಗೂ ಈಗಾಗಲೆ ಕೊರಿಸಿರುವ ಬೋರ್‍ವೆಲ್‍ಗಳಿಗೆ ಮೋಟರ್ ಅಳವಡಿಸಬೇಕು ಮತ್ತು ದುರಸ್ಥಿ ಇರುವ ಬೋರ್‍ವೆಲ್‍ಗಳನ್ನು ಸರಿಪಡಿಸಬೇಕು ಅಥವಾ ನೀರಿನ ಟ್ಯಾಂಕರ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನವರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ವಿಜಯಕುಮಾರ ಚಿನ್ನಿಕಟ್ಟಿ, ಡಾ. ಸಂತೋಷ ಆಲದಕಟ್ಟಿ, ಪ್ರಕಾಶ ಉಜನಿಕೋಪ್ಪ, ಆನಂದ ಮಿಸಿಹೊನ್ನಪ್ಪನವರ, ಸಲಿಂ ಪಟವೇಗಾರ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
