ಹಾನಗಲ್ಲ :
ತಾಲೂಕಿನ ರೈತರಿಗೆ ಬೆಳೆವಿಮೆಯಲ್ಲಿ, ತೋಟಗಾರಿಕೆ ಇಲಾಖೆಯಲ್ಲಿ, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ತಾಲೂಕ ಹಸೀರು ಸೇನೆ ರೈತ ಸಂಘಟನೆ ಸೋಮವಾರ ತಹಶೀಲ್ದಾರ ಎಮ್.ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಅರ್ಪಿಸುವ ಸಂಧರ್ಭದಲ್ಲಿ ತಾಲೂಕ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ, ಅಡಿವೆಪ್ಪ ಆಲದಕಟ್ಟಿ, ತಾಲೂಕ ಅದ್ಯಕ್ಷ ಮರಿಗೌಡ ಪಾಟೀಲ, ಗೌರವಾದ್ಯಕ್ಷ ಮಾಲತೇಶ ಪರಪ್ಪನವರ ಮಾತನಾಡಿ, 2016-17 ನೇ ಸಾಲಿನ ಬೆಳೆವಿಮೆಯಲ್ಲಿ ಅಕ್ಕಿ ಭತ್ತ ವ್ಯತ್ಯಾಸದ ತಾಲೂಕಿನ 4386 ರೈತರಿಗೆ ಸುಮಾರು 13 ಕೋಟಿ ರೂ, ಹಣ ಸರ್ಕಾರದ ಮಟ್ಟದಲ್ಲಿ ಹಣ ಬಿಡುಗಡೆಯಾಗಿ ರೈತರಿಗೆ ಕೊಡುವಂತೆ ನಿರ್ದೇಶನವಿದ್ದರು ಬ್ಯಾಂಕ ಅಧಿಕಾರಿಗಳು ಲೋಕಸಭೆಯ ಚುನಾವಣೆ ನೆಪ ಹೇಳಿ ನುಣಿಚಿಕೊಳ್ಳುತ್ತಿದ್ದರಿಂದ ರೈತ ಸಮುದಾಯ ತೀರ್ವವಾಗಿ ಖಂಡಿಸುತ್ತಿದ್ದು, ಕೂಡಲೆ ರೈತರಿಗೆ ಬರಬೇಕಾದ ಅಕ್ಕಿ ಭತ್ತ ವ್ಯತ್ಯಾಸದ ಬಾಕಿ ಹಣವನ್ನು ಅವರ ಖಾತೆಗೆ ಜಮೆಮಾಡಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ಸುಮಾರು ನಾಲ್ಕುವರೆ ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಪ್ರಸಕ್ತ ವರ್ಷ ತೀರ್ವ ಹವಾಮಾನ ವೈಪರಿತ್ಯದಿಂದ ತೊಟಗಾರಿಕೆ ಬೆಳೆಯಾದ ಮಾವಿನ ಗಿಡದ ಹೂಗಳು ಉದರಿ ಸಂಪೂರ್ಣ ಹಾಳಾಗುತ್ತಿದ್ದು. ಕಳೆದ ವರ್ಷಕ್ಕಿಂತ ನಿರಿಕ್ಷೀಸಿದಂತ ಫಸಲು ಈ ವರ್ಷ ಬಾರದೆ ಕೆಲವು ರೈತರು ಮಾವಿನಗೀಡಗಳನ್ನು ಕಟಾವು ಮಾಡಿ ಶುಂಠಿ, ಅಡಿಕೆಯಂತಹ ಪರ್ಯಾಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಜ್ಯದಲ್ಲಿಯೆ ಹೆಸರು ಮಾಡಿದ್ದ ಆಫೂಸ್ ಈ ಬಾರಿ ಹವಾಮಾನ ವೈಪರಿಯ್ಯದಿಂದ ಹಾಳಾಗಿದೆ. ಕೂಡಲೆ ತೋಟಗಾರಿಕೆ ಅಧಿಕಾರಿಗಳು ತಜ್ಞರ ಮುಖಾಂತರ ಗೀಡಗಳ ಬಗ್ಗೆ ಹಾಗೂ ಪಂಚಾಯತಿ ಮಟ್ಟದಲ್ಲಿ ಮಾವಿನ ಸಮಿಕ್ಷೆ ಕೈಗೊಂಡು ಸೂಕ್ತ ಪರಿಹಾರ ಒದಗಿಸಬೇಕೆಂದರು.
ಮಂಗಾರು-ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಹವಾಮಾನಕ್ಕೆ ಅನುಗುಣವಾಗಿ ರೈತರು ಶುಂಠಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ ಅವುಗಳಿಗೆ ಸರಿಯಾದ ಸಮಯಕ್ಕೆ ನೀರಿನ ಅವಶ್ಯಕತೆಯಿದ್ದು ಹೆಸ್ಕಾಂ ಅಧಿಕಾರಿಗಳು ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಸರಿಯಾದ ವೇಳೆ ಸಮರ್ಪಕ ವಿದ್ಯತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರುತಾಲೂಕಿಗೆ 3 ಕೋಟಿ ವೆಚ್ಚದಲ್ಲಿ ತಾಲೂಕ ಆಸ್ಪತ್ರೆಯಿದ್ದು ಡಾಕ್ಟರ ಹಾಗೂ ನರ್ಸಗಳ ಕೊರತೆಯಿದೆ, ಕೂಡಲೆ ಸಿಬ್ಬಂದಿಗಳನ್ನು ಭರ್ತಿಮಾಡಲು ಕ್ರಮಕೈಗೊಳ್ಳಬೇಕು ಎಂದರು.
ತಾಲೂಕಿಗೆ ಹೊಂದಿಕೊಂಡಿರುವ ಧರ್ಮಾ ನದಿಯಿಂದ ತಾಲೂಕಿನ 103 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಬೇಕಿದೆ ಇದರಿಂದ ಸಾವಿರಾರು ರೈತರಿಗೆ ದನಕರುಗಳಿಗೆ ಕಾಡುಪ್ರಾಣಿಗಳಿಗೆ ಕುಡಿಯುವುದಕ್ಕೆ ನೀರು ಒದಗಿಸಂತಾಗುತ್ತದೆ ಶಿಘ್ರದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.
ಈವೆಲ್ಲ ಬೇಡಿಕೆಗಳು ಶಿಘ್ರದಲ್ಲಿ ಸಂಭಂಧ ಪಟ್ಟ ಅಧಿಕಾರಿಗಳು ಬಗೆಹರಿಸದೆ ಹೋದರೆ ಬರುವ ಲೊಕಸಭೆ ಚುನಾವಣೆಯನ್ನು ರಾಜ್ಯ ರೈತ ಸಂಘ ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಅಧಕಾರಿಗಳಿಗೆ ಬಹಿಷ್ಕರಿಸುವುದಾಗಿ ತಿಳಿಸಿದರು.ರೈತ ಮುಖಂಡರಾದ ಶ್ರಿಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ, ಗಂಗಾಧರ ಕೊಪ್ಪದ, ಬಸನಗೌಡ ಪಾಟೀಲ, ಸೊಮಣ್ಣ ಜಡೇಗೊಂಡರ, ಮಹಾಲಿಂಗಪ್ಪ ಅಕ್ಕಿವಳ್ಳಿ, ತೋಟಗಾರಿಕೆ ಅಧಿಕಾರಿ ಮಂಜುನಾಥ ಬಣಕಾರ, ಹೆಸ್ಕಾಂ ಎಇಇ ಜಿಂಗಾಡೆ, ಮುಂತಾದವರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
