ನಾಮಪತ್ರ ಸಲ್ಲಿಕೆ : ಸಾಮಾಜಿಕ ಜಾಲತಾಣದ ಖಾತೆಯ ಹೆಸರು ಕಡ್ಡಾಯ..!!!

ಬೆಂಗಳೂರು

         ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಆಯೋಗಕ್ಕೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಐಡಿಯನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ.

         ಸಾಮಾಜಿಕ ಜಾಲತಾಣದ ಖಾತೆಯ ಐಡಿಯನ್ನು ಉಲ್ಲೇಖಿಸಿದ ನಂತರವಷ್ಟೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಕೈಗೊಳ್ಳಬಹುದಾಗಿದೆ ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೆ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡುವವರ ಮೇಲೆ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿರುವ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಎಂದು ಚುನಾವಣಾ ಆಯೋಗ ಈ ಸೂಚನೆ ನೀಡಿದೆ.

         ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವ ಉದ್ದೇಶದಿಂದ ದಿನದ 24 ಗಂಟೆಯೂ ಚುನಾವಣಾ ಆಯೋಗ ಕಾರ್ಯನಿರ್ವಹಿಸಲಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಕೈಗೊಳ್ಳುವ ಪ್ರಚಾರ ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ಪ್ರಕರಣ ದಾಖಲಾಗುವುದು ಖಂಡಿತ.

            ಚುನಾವಣಾ ಪ್ರಚಾರದ ವೇಳೆ ಸಾಕಷ್ಟು ಸುಳ್ಳು ಸುದ್ದಿಗಳು ಪ್ರಸಾರವಾಗುವ ಸಾಧ್ಯತೆ ಇದೆ. ಇದರಿಂದ ಜನರಿಗೆ ತಪ್ಪು ಮಾಹಿತಿ ತಲುಪಿಸಲು ಕೆಲವರಿಗೆ ಸಾಕಷ್ಟು ಅವಕಾಶವಿದೆ. ಇಂತಹ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

           ಸುಳ್ಳು ಸುದ್ದಿಗಳನ್ನು ಸೃಷ್ಠಿಸುವವರೂ ಸೇರಿದಂತೆ ಅದನ್ನು ಮತ್ತೊಬ್ಬರಿಗೆ ಫಾರ್‍ರ್ವಡ್ ಮಾಡುವವರನ್ನೂ ಆರೋಪಿ ಎಂದು ಪರಿಗಣಿಸುವುದಾಗಿ ಹೆಚ್ಚುವರಿ ಚುನಾವಣಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಫಿಡವಿಟ್‍ನಲ್ಲಿ ಸಾಮಾಜಿಕ ಜಾಲತಾಣ ಖಾತೆ ಐಡಿ ಉಲ್ಲೇಖಿಸುವುದು ಕಡ್ಡಾಯವಾಗಿದೆ ಸಾಮಾಜಿಕ ಜಾಲತಾಣಗಲು ಹೆಚ್ಚು ಬಳಕೆಯಾಗುತ್ತಿವೆ ಹಾಗೂ ಕೆಲವು ಸಂದರ್ಭಗಳಲ್ಲಿ ದುರ್ಬಳಕೆಯೂ ಆಗುತ್ತಿದೆ. ಇಂತಹ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಆಯೋಗ ಇಂತಹ ಕ್ರಮಕೈಗೊಂಡಿದೆ ಎಂದು ಆರ್ಥಿಕಾಭಿವೃದ್ಧಿ ನಿಗಮ ನಿರ ಸುನಿಲ್ ಪವಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link