ಬೆಂಗಳೂರು
ಜೆಡಿಎಸ್ ಮೈತ್ರಿ ಪಕ್ಷ ಬಿಎಸ್ಪಿಯ ಎನ್.ಮಹೇಶ್ ಮತ್ತೆ ಸಂಪುಟಕ್ಕೆ ಸೇರುವ ಸಾಧ್ಯತೆಳಿವೆ.ಇತ್ತೀಚಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್.ಮಹೇಶ್ ಮತ್ತೊಮ್ಮೆ ಸಚಿವರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಕ್ರಾಂತಿ ನಂತರ ಮಂತ್ರಿಮಂಡಲ ವಿಸ್ತರಣೆಯಾಗಲಿದ್ದು, ಬಗ್ಗೆ ಬಿಎಸ್ಸಿ ರಾಷ್ಟ್ರಾಧ್ಯಕ್ಷೆ ಮಾಯಾವತಿ ಜೊತೆ ದೇವೇಗೌಡು ಮಾತುಕತೆ ನಡೆಸಿದ್ದಾರೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಎನ್.ಮಹೇಶ್ ಗೆ ಸಚಿವ ಸ್ಥಾನ ನೀಡಿದರೆ ಜೆಡಿಎಸ್ ಗೆ ಒಂದು ಸಚಿವ ಸ್ಥಾನ ಉಳಿಯಲಿದೆ.ಹೀಗಾಗಿ ಒಂದು ಸ್ಥಾನವನ್ನು ಯಾರಿಗೆ ನೀಡಬೇಕೆಂಬ ಗೊಂದಲ ಪಕ್ಷದ ವರಿಷ್ಟರಲ್ಲಿದೆ ಎನ್ನಲಾಗಿದೆ.
ಬಿಎಸ್ಪಿ ವರಿಷ್ಟೆ ಮಾಯಾವತಿಯಿಂದ ಎನ್.ಮಹೇಶ್ ರನ್ನು ಸಂಪುಟಕ್ಕ ಸೇರ್ಪಡೆಗೊಳಿಸಿಕೊಳ್ಳಲು ಅನುಮತಿ ಸಿಕ್ಕರೆ ಕಾಂಗ್ರೆಸ್ ಶಾಸಕರ ಜತೆ ಮಾಜಿ ಸಚಿವ ಎನ್.ಮಹೇಶ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎನ್.ಮಹೇಶ್ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಲು ಅನುಮತಿ ಸಿಕ್ಕದೆ ಉಳಿದ ಒಂದು ಸ್ಥಾನಕ್ಕೆ ಸಕಲೇಶಪುರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ನೆಲಮಂಗಲದ ಡಾ.ಶ್ರೀನಿವಾಸ್ ಮೂರ್ತಿ, ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ, ಮಳವಳ್ಳಿಯ ಅನ್ನದಾನಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಾಜಿ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಭಾರೀ ಪೈಪೊಟಿಗಿಳಿದಿದ್ದಾರೆ.
ಒಂದು ಸ್ಥಾನವನ್ನು ಯಾರಿಗೆ ಕೊಟ್ಟರು ಮತ್ತಷ್ಟು ಶಾಸಕರಿಗೆ ಬೇಸರವಾಗಲಿದೆ. ಇದರ ಪರಿಣಾಮ ಮುಂದಿನ ಲೋಕಸಭಾ ಚುನಾವಣೆ ಮೇಲೆ ಬೀರಲಿದೆ ಎಂಬ ಆತಂಕ ಮಾಜಿ ಪ್ರಧಾನಿ ದೇವೇಗೌಡರದ್ದಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಮಂತ್ರಿಮಂಡಲ ವಿಸ್ತರಿಸಲು ಜೆಡಿಎಸ್ ಚಿಂತನೆ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ