ಎಂ ಎನ್ ಕೋಟೆ :
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಸಹ ಸಕ್ರಿಯವಾಗಿ ಶಾಂತಿಯುತ ಮತದಾನವನ್ನು ಮಾಡುವ ಮುಖಾಂತರ ಯಾವುದೇ ಕಾನೂನು ಉಲ್ಲಘನೆ ಆಸೆ ಅಮೀಷೆಗಳಿಗೆ ಬಲಿಯಾಗದಿರಿ ಎಂದು ಚೇಳೂರು ಪಿಎಸ್ಐ ಬಿ.ಕೆ.ಪ್ರಕಾಶ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಹಣ,ಹೆಂಡ ಇತರ ಬೆಲೆ ಬಾಳುವ ವಸ್ತುಗಳನ್ನು ನೀಡಿ ಅಮೀಷ ಹೊಡ್ಡಿ ನಿಮ್ಮನ್ನು ದಿಕ್ಕು ತಪ್ಪಿಸುತ್ತಾರೆ.ಎಲ್ಲರೂ ಸಹ ಯಾವುದೇ ಪಕ್ಷವಾದರೂ ಕೂಡ ಯಾವುದೇ ಗಲಾಭೆಗಳನ್ನು ಮಾಡಿಕೊಳದೆ ಎಲ್ಲರು ಸೌಹರ್ದತೆಯಿಂದ ಬದುಕಬೇಕು.ಚುನಾವಣೆಯ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಘೀಸಬಾರದು ಅಹಿತರ ಘಟನೆ ನಡೆಯದಂತೆ ಮಾಡಿಕೊಳಬಾರದು ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಮ್ಮ ಅಮೂಲ್ಯವಾದ ಮತವನ್ನು ಎಲ್ಲರು ಸಹ ಚಲಾಯಿಸಬೇಕು.ಎಲ್ಲಾದರೂ ಹಣ,ಹೆಂಡವನ್ನು ಹಂಚಿಕೆ ಮಾಡುವುದು ಕಂಡು ಬಂದರೆ ತಕ್ಷಣ ಫೋಲೀಸ್ ಇಲಾಖೆಗೆ ಮಾಹಿತಿ ಕೊಡಬೇಕು.ಅಮೀಷ ಹೊಡುವ ವಿರುದ್ಧ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ ಎಂದರು. ಎಲ್ಲರು ಸೌಹರ್ದತೆಯಿಂದ ತಮ್ಮ ಮತವನ್ನು ಚಲಾಯಿಸಬೇಕು. ಈ ಸಮಯದಲ್ಲಿ ಯಾವುದೇ ಗಲಾಟೆಗಳು ನಡೆದರೆ ಕ್ರಿಮಿನಲ್ ಕೇಸ್ ಆಗುತ್ತದೆ.ಆದ್ದರಿಂದ ಎಲ್ಲರೂ ಸಹ ಶಾಂತಿಯುತವಾಗಿ ಮತದಾನವನ್ನು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಡಿಓ ಸಿ.ನಾಗೇಂದ್ರ,ಗ್ರಾಮಲೆಕ್ಕಧಿಕಾರಿಗಳಾದ ಮಲ್ಲಿಕಾರ್ಜುನ್,ರಂಗನಾಥ್,ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಸಂಧೀಪ್, ಫೋಲೀಸ್ ಸಿಬ್ಬಂದಿಗಳಾದ ಮಧು,ಮಧುಸೂದನ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ