ಹಾವೇರಿ :
ಇಲ್ಲಿನ ರಾಮಮಂದಿರದ ಮೈತ್ರೇಯಿ ಮಹಿಳಾ ಮಂಡಳದವರು ನಗರದ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಹೊದಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.ವೃದ್ಧರ ಸುಖ-ದುಖಃಗಳನ್ನು ಹಂಚಿಕೊಂಡರು.ಮಂಡಳದ ಇಪ್ಪತ್ತಕ್ಕೂ ಅಧಿಕ ಗೃಹಿಣಿಯರು ಇಪ್ಪತ್ತೈದು ಹೊದಕಿಗಳನ್ನು ವಿತರಿಸಿ ಅವರೊಡನೆ ಅಲ್ಪೋಪಹಾರ ಸವಿ ಸವಿದರು.
ಈ ಸಂದರ್ಭದಲ್ಲಿ ಮೈಥಿಲಿ ಬದಾಮಿ, ಶಾಮಲಾ ಕುಲಕರ್ಣಿ, ರಂಜನಾ ಡಂಬಳ, ವೀಣಾ ಕುಲಕರ್ಣಿ, ಉಮಾ ಪಾಟೀಲ, ಇಂದು ಕುಲಕರ್ಣಿ, ಶಾರದಾ ಗೋಕಾಕ, ಪದ್ಮಾ ಡಂಬಳ, ಅಂಬುಜಾ ಬದಾಮಿ, ಮಾಲತೇಶ ಕುರ್ತಕೋಟಿ, ಗುರುರಾಜ ಶಿವಪೂಜಿ ಹಾಗೂ ವೃದ್ಧಾಶ್ರಮದ ವ್ಯವಸ್ಥಾಪಕಿ ರೇಣುಕಾ ಅನೇಕರಿದ್ದರು.