ನವದೆಹಲಿ:
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಹಾಗೂ ರವಿ ಶಂಕರ್ ಪ್ರಸಾದ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
Delhi: Former Cricketer Gautam Gambhir joins Bharatiya Janata Party(BJP) in the presence of Union Ministers Arun Jaitley and Ravi Shankar Prasad pic.twitter.com/EYmhfSSMy7
— ANI (@ANI) March 22, 2019
ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಮಾತನಾಡಿದ ಡೆಲ್ಲಿ ಬ್ಯಾಟ್ಸ್’ಮನ್ ಗಂಭೀರ್, ಭಾರತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನಾವೆಲ್ಲ ಭಾರತವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ಗಂಭೀರ್, ರಾಜಕೀಯಕ್ಕೆ ಸೇರುತ್ತಾರೆ ಅನ್ನೋ ಊಹಾಪೋಹಗಳು ಕೆಲವು ದಿನಗಳಿಂದ ಹರಡಿದ್ದವು. ಈಗ ಬಿಜೆಪಿ ಸೇರ್ಪಡೆಯ ಮೂಲಕ ಸಾಕಷ್ಟು ದಿನಗಳಿಂದ ಹರಡಿದ್ದ ಊಹಾಪೋಹಗಳಿಗೆ ಎಡಗೈ ಬ್ಯಾಟ್ಸ್’ಮನ್ ತೆರೆ ಎಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ